ಅಂಕೋಲಾ : ತಾಲೂಕಿನ ಜಮಗೋಡು ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಸೋಮವಾರ ಸಂಜೆ ಹೆಜ್ಜೇನು ದಾಳಿ ನಡೆದಿದೆ.
ಧಾರವಾಹಿ ಚಿತ್ರೀಕರಣದ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆದಿದ್ದು, ಚಿತ್ರೀಕರಣದಲ್ಲಿ ಇಬ್ಬರು ಲೈಟಿಂಗ್ ಸಹಾಯಕರಿಗೆ ಗಾಯವಾಗಿದೆ.
ಮಂಡ್ಯ ಮೂಲದ ರಮೇಶ್ ಮತ್ತು ರಾಮು ಹೆಜ್ಜೇನು ದಾಳಿಗೊಳಗಾದವರು
ಹೆಜ್ಜೇನು ದಾಳಿಯಿಂದ ಲೈಟಿಂಗ್ ಸಹಾಯಕರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು. 108 ವಾಹನಕ್ಕೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಬಳಿಕ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನ ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.