ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಧಾರವಾಡ ಹೈಕೋರ್ಟ್ ಪೀಠದಲ್ಲಿ ಸ್ವಾತಂತ್ರ್ಯೋತ್ಸವ

ಧಾರವಾಡ ಹೈಕೋರ್ಟ್ ಪೀಠದಲ್ಲಿ ಸ್ವಾತಂತ್ರ್ಯೋತ್ಸವ

Tue, 16 Aug 2022 04:48:34  Office Staff   SO News

ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ  ಪೀಠದಲ್ಲಿ 76 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು . 

ಹಿರಿಯ ನ್ಯಾಯಮೂರ್ತಿ  ಎಸ್.ಜಿ.ಪಂಡಿತ್  ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ,  ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ವಕೀಲರ ಪಾತ್ರವನ್ನು ಸ್ಮರಿಸಿದರು.

ವಕೀಲ ವೃತ್ತಿಯಿಂದ ರಾಷ್ಟ್ರ ನಾಯಕರಾದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ , ಡಾ.ಬಾಬು ರಾಜೇಂದ್ರ ಪ್ರಸಾದ್ , ಸರ್ದಾರ್ ವಲ್ಲಭಬಾಯಿ ಪಟೇಲ್ , ಮದನ್ ಮೋಹನ್ ಮಾಳವಿಯಾ ,  ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ  ಮೊದಲಾದವರವರನ್ನು ಸ್ಮರಿಸಿದರು . 

 ಸಂವಿಧಾನದ 51 ಎ  ವಿಧಿಯಡಿಯಲ್ಲಿರುವ ಮೂಲಭೂತ ಕರ್ತವ್ಯಗಳನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕರು ನಿರ್ವಹಿಸಬೇಕು. ನ್ಯಾಯಾಂಗ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯಿಂದ ಪ್ರಮುಖ ಬದಲಾವಣೆಗಳಾಗುತ್ತಿವೆ , ಆಧುನಿಕರಣದ ಈ ಯುಗದಲ್ಲಿ  ಹೆಚ್ಚಿನ ತಂತ್ರಜ್ಞಾನದ ಮೂಲಸೌಕರ್ಯವನ್ನು ನಿರ್ಮಿಸುವ ಅಗತ್ಯತೆ ಇದೆ ಎಂದರು.

 ಕರ್ನಾಟಕ ಉಚ್ಛ ನ್ಯಾಯಾಲಯದ  ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ ,  ಎ.ಎಸ್.ಕಿಣಗಿ ,  ಎಂ.ಐ.ಅರುಣ ,ರವಿ ಹೊಸಮನಿ ,  ಜೆ.ಎಮ್.ಖಾಜಿ , ಅನಂತ ಆರ್ . ಹೆಗಡೆ , ಅಧಿಕ ಮಹಾವಿಲೇಖನಾಧಿಕಾರಿ ರೋಣ ವಾಸುದೇವ, ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್.ಹುಲಗಿ ಸೇರಿದಂತೆ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ , ರಾಜ್ಯ ಸರ್ಕಾರದ ವಕೀಲರು , ರಾಜ್ಯ ಪಬ್ಲಿಕ್  ಪ್ರಾಸಿಕ್ಯೂಟರ್ , ಮತ್ತು ವಕೀಲರ ಸಂಘದ ಪದಾಧಿಕಾರಿಗಳು  ಹಾಜರಿದ್ದರು .


Share: