ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದೇವರನ್ನೂ ಭ್ರಷ್ಟರನ್ನಾಗಿಸಿದ ವ್ಯವಸ್ಥೆ:ಅನಂತಕುಮಾರ ಹೆಗಡೆ

ದೇವರನ್ನೂ ಭ್ರಷ್ಟರನ್ನಾಗಿಸಿದ ವ್ಯವಸ್ಥೆ:ಅನಂತಕುಮಾರ ಹೆಗಡೆ

Thu, 21 Apr 2022 06:11:06  Office Staff   SO NEWS

ಭಟ್ಕಳ:ಜನರು ತಾವು ಭ್ರಷ್ಟರಾಗುವ ಜೊತೆಗೆ ತಮಗೆ ಬೇಕಾದ ದೇವರನ್ನು ಕೂಡ ಭ್ರಷ್ಟರನ್ನಾಗಿ ಮಾಡಿದ್ದಾರೆ. ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ ಹಾಗೆ, ತಮ್ಮ ಅಪೇಕ್ಷೆಗೆ ತಕ್ಕಂತೆ ಸರ್ಕಾರಿ ವ್ಯವಸ್ಥೆಯನ್ನೇ ಭ್ರಷ್ಟವನ್ನಾಗಿ ಬದಲಾಯಿಸಿರುವುದು ಸುಳ್ಳಲ್ಲ' ಎಂದು ಅನಂತಕುಮಾರ ಹೆಗಡೆ ಹೇಳಿದರು. ಸಂಸದ ಸಾರದ ಹೊಳೆ ಹಳೇಕೋಟೆ ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ  ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ದೇವಸ್ಥಾನ ಎಂದರೆ ಕಲೆಯ ಚಮತ್ಕಾರವಲ್ಲ. ಅದು ಶಕ್ತಿಯ ಆವಿರ್ಭಾವ ಕೇಂದ್ರ. ನಮ್ಮ ಪೂರ್ವಜರು
ಉಲ್ಲೇಖಿಸಿರುವ ಒಂದೊಂದು ಸಿದ್ಧಾಂತಕ್ಕೂ ವೈಜ್ಞಾನಿಕ ಹಿನ್ನೆಲೆ ಇದೆ.ಶಾಸ್ತ್ರೀಯವಾಗಿ ನಿರ್ಮಾಣವಾದ ದೇಗುಲಗಳಲ್ಲಿ ಭಕ್ತರಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಹಗುರವಾಗುತ್ತದೆ. ದೇವಸ್ಥಾನಗಳನ್ನು ಕಟ್ಟುವುದು ನಮ್ಮ ಸ್ವಾರ್ಥಕ್ಕಾಗಿ ಅಲ್ಲ' ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರತಿ ಭಕ್ತನ ಸಹಕಾರ ಬೇಕಾಗುತ್ತದೆ. ಉಳ್ಳವರು ಆರ್ಥಿಕವಾಗಿ ಸಹಾಯ 'ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಮಾಡಿದರೆ, ಉಳಿದವರು ಶ್ರಮದ ಮೂಲಕ ಸಹಕಾರ ನೀಡುತ್ತಾರೆ. ಇಂದಿನ ಕಾಲದಲ್ಲಿ ಇಡೀ ಹಿಂದೂ ಸಮಾಜಕ್ಕೆ ಶಕ್ತಿ ಕೊಡುವ ಅಗತ್ಯ ಇದೆ' ಎಂದು ಹೇಳಿದರು.
ಆ ನಿಟ್ಟಿನಲ್ಲಿ ಶ್ರೀರಾಮಕ್ಷೇತ್ರ ಮಠಾಧೀಶರಹ್ಮಾನಂದ ಸರಸ್ವತಿ ಸ್ವಾಮೀಜಿ ಜನಜಾಗೃತಿ ಮಾಡುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯಲ್ಲಿ ಏರುಪೇರುಗಳಾದಾಗ ತಾವೇ ಮುಂದೆ ನಿಂತು ಚಾಟಿ ಬೀಸುತ್ತಿದ್ದಾರೆ. ಇದು ಅವರ ಶಕ್ತಿ' ಎಂದರು.
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸುನೀಲ ನಾಯ್ಕ ಮಾತನಾಡಿದರು. ಕಾಸ್ಕಾರ್ಡ್ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಈಶ್ವರ ನಾಯ್ಕ, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಾಯ ನಾಯ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ, ಮೊಕ್ತಸರ ಸುಬ್ರಾಯ ಜೆ.ನಾಯ್ಕ ಇದ್ದರು.


Share: