ಹಾಸನ, ನ 29: ಅಂಧರನ್ನು ಕಡೆಗಣಿಸದೆ ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಸುವರ್ಣ ಅಂಧರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಾಲಕೃಷ್ಣ, ಅಂಧರ ಏಳಿಗೆಗೆ ರಾಜಕಾರಣಿಗಳು ಕೂಡ ಕಾಳಜಿ ವಹಿಸುವ ಅಗತ್ಯವಿದೆ ಎಂದರು.
ಅಂಧರು ಸಬಲರಾಗಿ ತಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಸಂಘವನ್ನು ಅಸ್ಥಿತ್ವಕ್ಕೆ ತಂದಿರುವುದು ಔಚಿತ್ಯ ಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ಪರಿಸರವಾದಿ ಚ.ನ.ಅಶೋಕ್, ಪುರಸಭೆ ಸದಸ್ಯ ಸತ್ಯನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬ್ರಹ್ಮಪಾಲ್ ಜೈನ್, ಸಮಾಜ ಸೇವಕಿ ಯಶೋಧ ಜೈನ್ ಇತರರು ಉಪಸ್ಥಿತರಿದ್ದರು.