ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಜಿರೆ: ವಿಶ್ವ ತುಳು ಸಮ್ಮೇಳನ : ಪ್ರಗತಿ ಕಾರ್‍ಯಗಳ ಪರಿಶೀಲನೆ

ಉಜಿರೆ: ವಿಶ್ವ ತುಳು ಸಮ್ಮೇಳನ : ಪ್ರಗತಿ ಕಾರ್‍ಯಗಳ ಪರಿಶೀಲನೆ

Wed, 18 Nov 2009 03:22:00  Office Staff   S.O. News Service
ಉಜಿರೆ, ನವೆಂಬರ್ ೧೭ : ವಿಶ್ವ ತುಳು ಸಮ್ಮೇಳನಕ್ಕೆ ಕೇವಲ ೨೨ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್‍ಯಗಳಿಗು ವೇಗ ಸಿಕ್ಕಿದೆ. ಸಮ್ಮೇಳನದ ಮುಖ್ಯ ಸಭಾಂಗಣ, ನಗರ ಅಲಂಕಾರ, ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಕಾರ್‍ಯಗಳು ಭರದಿಂದ ಸಾಗುತ್ತಿವೆ.
 
ಈ ಸಂದರ್ಭದಲ್ಲಿ ವಿಶ್ವ ತುಳು ಸಮ್ಮೇಳನದ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್, ಸ್ವಾಗತ ಸಮಿತಿ ಸದಸ್ಯರಾದ ಏರ್‍ಯ ಲಕ್ಷ್ಮೀನಾರಾಯಣ ಆಳ್ವ, ಪ್ರಸನ್ನ ಕುಮಾರ್, ಧನ್ಯ ಕುಮಾರ್ ರೈ, ಉಪ್ಪಿನಂಗಡಿ, ಚಪ್ಪರ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಜೈನ್ ಬಾರ್‍ಯ, ಕಾರ್‍ಯದರ್ಶಿ ಜಗದೀಶ್ ಪ್ರಸಾದ್ ಮೊದಲಾದ ಗಣ್ಯರು ಸಮ್ಮೇಳನದ ಮುಖ್ಯ ಕಛೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮ್ಮೇಳನದ ಕಾರ್‍ಯದರ್ಶಿ ಡಾ. ಬಿ. ಯಶೋವರ್ಮ ಇದುವರೆಗೆ ನಡೆದ ಪ್ರಗತಿ ಕಾರ್‍ಯಗಳ ಮಾಹಿತಿ ನೀಡಿದರು. ನಂತರ ಕಾಮಗಾರಿ ನಡೆಯುತ್ತಿರುವ ಸ್ಥಳ ಹಾಗೂ ಮಾದರಿ ತುಳು ಗ್ರಾಮಕ್ಕೆ ಭೇಟಿ ನೀಡಿದರು. ಪ್ರಗತಿ ಕಾರ್‍ಯಗಳನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.


Share: