ದಾಂಡೇಲಿ : ತಾಲೂಕಿನ ಬರ್ಚಿ ಸರ್ಕಲ್ ಬಳಿ ಬೈಕ್ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾಂಡೇಲಿ ನಗರದ ಟೌನ್ ಶಿಪ್ ನಿವಾಸಿ ಫಾರುಕ್ ಸಲೀಂ ಶೇಖ್ (38) ಬಂಧಿತ. ತಾಲ್ಲೂಕಿನ ಬರ್ಚಿಕ್ರಾಸ್ ಬಳಿ ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತನಿಂದ ಒಂದುವರೆ ಲಕ್ಷ ರೂ.ಮೌಲ್ಯದ 3.250ಕೆಜಿ ಗಾಂಜಾ ಮತ್ತು ಕೃತ್ಯವನ್ನು ನಡೆಸಲು ಉಪಯೋಗಿಸಿದ ಹೀರೊ ಸ್ಪ್ಲೆಂಡರ್ ಮೊಟಾರ್ ಸೈಕಲ್ ಜಪ್ತು ಮಾಡಲಾಗಿದೆ.
ಡಿಎಸ್ಪಿ ಗಣೇಶ ಕೆ.ಎಲ್., ಸಿಪಿಐ ದಯಾನಂದ ಶೇಗುಣಸಿ, ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಸಿಬ್ಬಂದಿ
ಚಿನ್ಮಯ್ ಪತ್ತಾರ, ಉಮೇಶ ತುಂಬರಗಿ, ರೋಹಿತ್ ಕುಮಾರ, ಮಹೇಶ ಗಾವಡಿ, ಸುಧೀರ ನಾಯ್ಕ, ಮಂಜುನಾಥ ದ್ಯಾಮಟ್ಟಿ, ಲಿಯಾಖತ್ ಅಲಿ ಕಾರ್ಯಾಚರಣೆಯಲ್ಲಿ ಇದ್ದರು.