ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಾಂಡೇಲಿಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ. ಇಬ್ಬರ ಸಾವು. ಮೂವರಿಗೆ ಗಾಯ‌

ದಾಂಡೇಲಿಯಲ್ಲಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ. ಇಬ್ಬರ ಸಾವು. ಮೂವರಿಗೆ ಗಾಯ‌

Tue, 12 Apr 2022 04:01:27  Office Staff   SO News

ದಾಂಡೇಲಿ: ಹಳಿಯಾಳ ದಾಂಡೇಲಿ ರಸ್ತೆಯ  ಡೋಮಗೇರಾ ಕ್ರಾಸ್ ಬಳಿ  ರವಿವಾರ ಬೆಳಗಿನ  ಜಾವ  ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ಪರಿಷಾಮವಾಗಿ ಇಬ್ಬರು ಸಾವನ್ಮಪ್ಪಿದ್ದಾರೆ‌. ಹಳಿಯಾಳ ಮಾರ್ಗವಾಗಿ ದಾಂಡೇಲಿ ಬರುತ್ತಿದ್ದು ಕಾರು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರಿಗೆ ಗಾಯಗಳಾಗಿವೆ.

ಮೃತರನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಲಿಸಿದ್ದೆಗೌಡದೊಡ್ಡಿ ನಿವಾಸಿಗಳಾದ  ಭೈರಪ್ಪ ವೆಂಕಟೇಶ ಸಿದ್ಧಯ್ಯ(27) ಕೆಂಪೇಗೌಡ ಮರಿಯಪ್ಪ (40) ಗುರುತಿಸಲಾಗಿದೆ.

  ನಾಗರಾಜ್( 24),
ಪ್ರಶಾಂತ ದೊಳಪ್ಪ (29),
ಕುಮಾರ ಗೌಡ (30) ಗಾಯಗೊಂಡಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ  ಸಾಗಿಸಲಾಗಿದೆ.

ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸಿಪಿಐ ಪ್ರಭು ಗಂಗನಹಳ್ಳಿ ಪಿಎಸ್ಐ ಐ.ಆರ್. ಗಡ್ಡೇಕರ  ತನಿಖೆಯನ್ನು ಮುಂದುವರಿಸಿದ್ದಾರೆ.


Share: