ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಂತವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೀರ್ತಿ ಶೆಟ್ಟಿ

ದಂತವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕೀರ್ತಿ ಶೆಟ್ಟಿ

Thu, 21 Dec 2023 05:41:26  Office Staff   SO News

ಭಟ್ಕಳ: ಭಾರತೀಯ ದಂತವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ಭಟ್ಕಳದ ಹಿರಿಯ ದಂತ ವೈದ್ಯ ಡಾ. ಕೀರ್ತಿ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆಯಿತು. 

ಪದಾಧಿಕಾರಿಗಳ ಆಯ್ಕೆಯಲ್ಲಿ 2024 ನೇ ಸಾಲಿನ ಉಪಾಧ್ಯಕ್ಷರಾಗಿ ಭಟ್ಕಳದ ಡಾ. ಕೀರ್ತಿ ಶೆಟ್ಟಿ ಅವರು ಆಯ್ಕೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ ಕಾರ್ಯಕಾರಿ ಸಮಿತಿಗೆ ಗೋಕರ್ಣದ ಡಾ. ರಾಮು ಮಲ್ಲನ್, ಕಾರವಾರದ ಡಾ. ಸೂರಜ್ ಹೆಗಡೆ ಇವರೂ ಕೂಡಾ ಆಯ್ಕೆಯಾಗಿದ್ದಾರೆ.  ಡಾ. ಕೀರ್ತಿ ಶೆಟ್ಟಿ ಅವರು ಈ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು, 2013ರಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದು.


Share: