ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ತಾಲೂಕ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ

ತಾಲೂಕ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ

Tue, 26 Jul 2022 06:07:46  Office Staff   SO NEWS

ಭಟ್ಕಳ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ, ತಾಲೂಕ ಆಡಳಿತ ಭಟ್ಕಳ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಭಟ್ಕಳ ಹಾಗೂ ತಾಲೂಕ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯ ಕಾರ್ಯಕ್ರಮವು ಸೋಮವಾರದಂದು ತಾಲೂಕ ಆಸ್ಪತ್ರೆ ಸಭಾಭವನದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. 'ಜುಲೈ 11 ವಿಶ್ವ ಜನಸಂಖ್ಯೆ ದಿನ. ಇದರ ನಿಯಂತ್ರಣದ ಹಿನ್ನೆಲೆ ಈ‌‌ ದಿನ ಜಾಗ್ರತಿ ಕಾರ್ಯಕ್ರಮ ಆಚರಣೆ ಮಾಡಲಿದ್ದೇವೆ. ಈ ವರ್ಷದ ಘೋಷ ವಾಕ್ಯದಂತೆ ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತಿಯ ಹೊಸ ಅಧ್ಯಾಯ ಬರೆಯೋಣ ಎಂಬಂತೆ ಜನರಲ್ಲಿ ಜನಸಂಖ್ಯೆಯ ಕುರಿತು ಜಾಗ್ರತಿ ಇರಬೇಕು. 

ಜನಸಂಖ್ಯೆಯಿಂದ ಮಾರಕ ಹಾಗೂ ಪೂರಕ ಎರಡು ಅಂಶವನ್ನು ಹೊಂದಿದ್ದು, ದೇಶಕ್ಕೆ ಹಾಗೂ ಕುಟುಂಬಕ್ಕೆ ಹೇಗೆ ಅದು ಉಪಯುಕ್ತವಾಗಲಿದೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಇನ್ನು ಆಶಾ ಕಾರ್ಯಕರ್ತೆಯರಿಂದ ಪ್ರತಿ ಮನೆಗೆ ತೆರಳಿ ಜನಸಂಖ್ಯೆ ಆರೋಗ್ಯದ ಕಾಳಜಿ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹರಿಯಾಣ ಸೇರಿದಂತೆ ಇನ್ನಷ್ಟು ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿವೆ. ಇದರಿಂದ ಲಿಂಗ ಸಮಾನತೆಗೆ ಪೆಟ್ಟು ಬೀಳುತ್ತಿದೆ. ಸಾಮಾಜಿಕವಾಗಿ ಜನರಲ್ಲಿ ಜನಸಂಖ್ಯೆಯಿಂದ ಅಭಿವೃದ್ಧಿಯತ್ತ ಸಾಗಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂಬುದು ಉದ್ದೇಶ ಹೊಂದಬೇಕಿದೆ‌ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತು ಹಾಗೂ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಆರೋಗ್ಯಾಧಿಕಾರಿ, ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.‌ ಸವಿತಾ ಕಾಮತ್ '
ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ ಭಾರತ ಇದ್ದು ಆದರೆ ಕೋವಿಡ್ ಹಿನ್ನೆಲೆ‌ ಜನಗಣತಿ ಆಗಿಲ್ಲವಾಗಿದೆ. ಗಣತಿಯಾದಲ್ಲಿ ಭಾರತ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದೆ. ಈ‌ ನಿಟ್ಟಿನಲ್ಲಿ ಜನಸಂಖ್ಯೆ ಪ್ರಮಾಣ ಕಡಿಮೆಯಾಗಬೇಕು ಇದು ದೇಶಕ್ಕೆ ಮಾರಕವಾಗಲಿದೆ.

ಜನಸಾಮಾನ್ಯರಲ್ಲಿ ಜನಸಂಖ್ಯೆಯ ವ್ಯಾಖ್ಯಾನ‌ ಹೇಗಿದೆ ಎಂದರೆ ನಮ್ಮ ಕುಟುಂಬಕ್ಕೆ ನಾವು ಆಧಾರವಾಗಿದ್ದೇವೆ.‌ ಮಕ್ಕಳ ವಿಚಾರದಲ್ಲಿ ಇಲಾಖೆ ಯಾಕೆ ತಡೆ ಹಿಡಿಯಬೇಕು ಎಂದು ಪ್ರಶ್ನಿಸುತ್ತಾರೆ. ಜೀವನದ ಮೌಲ್ಯವೂ ಜನಸಂಖ್ಯೆಯಿಂದ ಹೊಡೆತ ಬೀಳಲಿದೆ. ಜೀವನ ಪರಿಪೂರ್ಣತೆಗೆ ಮಕ್ಕಳು ಹೇರುವುದೇ ಒಂದೇ ದಾರಿಯಾಗಬಾರದು. ಈ ಹಿಂದೆ ಈ ಪದ್ದತಿ ಇತ್ತು. ಆದರೆ ಈಗ ನಮಗಿಂತ ನಮ್ಮ ಸುತ್ತಮುತ್ತಲಿನ ಜನರಿಗೆ ಚಿಂತೆ ಹೆಚ್ಚಿವೆ.
ಹಳ್ಳಿ ಕಡೆಯಲ್ಲಿ ಗಂಡು ಮಕ್ಕಳ ಆಸೆಗೆ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ‌. ಆದರೆ ಜನಸಂಖ್ಯೆಯಿಂದ ಕುಟುಂಬ ನಿರ್ವಹಣೆ ಕಷ್ಟ, ಮಕ್ಕಳಿಗೆ ಶಿಕ್ಷಣ ಇನ್ನಷ್ಟು ಸಮಸ್ಯೆಯಾಗಲಿದೆ. ಜನಸಂಖ್ಯೆಯನ್ನು ಚೀನಾದಲ್ಲಿ ದೇಶಕ್ಕೆ ಪೂರಕವಾಗಿಸಿಕೊಂಡಿದ್ದಾರೆ.  ಆದರೆ ಇದು ಭಾರತದಲ್ಲಿ ಅದು ಮಾರಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರ ಡಾ. ಬಾಲಚಂದ್ರ ಮೇಸ್ತಾ ಮಾತನಾಡಿ'  ಜನಸಂಖ್ಯೆ ಎಂಬುದು ವರವಾಗಿ ಈಗ ಶಾಪವಾಗಿದೆ. ಜನಸಂಖ್ಯೆಯನ್ನು ದೇಶದ ಕುಟುಂಬದ ಪೂರಕವಾಗಿ ಬೆಳೆಸಿಕೊಳ್ಳಬೇಕು. ಜನಸಂಖ್ಯೆಯಿಂದ ಗಂಡಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು, ಹೆಣ್ಣನ್ನು ಕೀಳಾಗಿ ನೋಡುತ್ತಿದ್ದರು. ಇದು ಬದಲಾಗಬೇಕು. ದೇಶದಲ್ಲಿ ಕೇರಳ ರಾಜ್ಯವು ಹೆಣ್ಣಿನ ಸಂಖ್ಯೆಯಲ್ಲಿ ಮುಂದಿದೆ. ಅವರ ಸಾಕ್ಷರತೆ ಸಹ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಗಂಡು ಹೆಣ್ಣಿನ ಬೇದ ರಕ್ತದಲ್ಲಿ ಬಂದಿದೆ. ಅದರ ಬೇದದಲ್ಲಿ ಬದಲಾವಣೆಯಾಗಬೇಕು. ಕೆಲ ಸಮುದಾಯದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆಯಿದ್ದು, ವಂಶ ಬೆಳೆಸುವ ಹಿನ್ನೆಲೆ ಬೇರೆ ಕಡೆಯಿಂದ ಹೆಣ್ಣು ತಂದು ಮದುವೆ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನು‌ ಅತ್ತ ಪ್ರಕ್ರತಿಯೇ ಜನಸಂಖ್ಯೆಯನ್ನು ಹಿಡಿತದಲ್ಲಿಟ್ಟುಕೊಂಡಿದೆ. ಅದರೊಂದಿಗೆ ನಾವು ಸಹ ಜನಸಂಖ್ಯೆ ನಿಯಂತ್ರಿಸಬೇಕಿದೆ. ಈ‌‌ ಹಿಂದೆ 
ಜಗತ್ತಿನಲ್ಲಿ 1 ಮಿಲಿಯನ್ ಜನಸಂಖ್ಯೆ ಕಡಿಮೆಯಾಗಿದ್ದು, ಬಾಂಗ್ಲಾದಲ್ಲಿ ಭೀಕರ ಬರಗಾಲ ಉಂಟಾಗಿದೆ. ಅದರಂತೆ ಎರಡು ವರ್ಷ ಕೋವಿಡನಲ್ಲಿಯೂ ಸಹ ಸಾವುಗಳಾಗಿವೆ‌ ಎಂದರು.

ನಂತರ ಸರಕಾರಿ ಆಸ್ಪತ್ರೆಯ ಹೆರಿಗೆ ತಜ್ಞ ಡಾ. ಸಹನ ಕುಮಾರ ಮಾತನಾಡಿದರು. ಆಸ್ಪತ್ರೆಯ ಸಿಬ್ಬಂದಿ ಎಸ್. ಶ್ರೀನಿವಾಸ  ಸ್ವಾಗತಿಸಿದರು.
ಈ ಸಂದರ್ಬದಲ್ಲಿ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.


Share: