ಕುಮಟಾ : ಲಾರಿಯೊಂದರ ಟಯರ್ ಪಂಕ್ಚರ್ ತೆಗೆಯುತ್ತಿದ್ದಾಗ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಮಟಾ ತಾಲೂಕಿನ ದುಂಡಕುಳಿ ರಾ. ಹೆದ್ದಾರಿ ಬಳಿ ಈ ಅಪಘಾತ ಸಂಭವಿಸಿದೆ.
ಉತ್ತರ ಪ್ರದೇಶ ಮೂಲದ ಶಕೀಲ್ ಅಹಮದ್ (42)ಮೃತ ದುರ್ದೈವಿ.
ಹೆದ್ದಾರಿ ಪಕ್ಕದಲ್ಲಿ ಪಂಕ್ಚರ್ ಆಗಿದ್ದರಿಂದ ಲಾರಿ ನಿಂತಿತ್ತು. ಚಾಲಕ ಶಕೀಲ್ ಕೆಳಗಿದ್ದು ಪಂಕ್ಚರ್ ತೆಗೆಯುತ್ತಿದ್ದ ಈ ವೇಳೆ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದಿದ್ದರಿಂದ ಚಾಲಕನ ದೇಹ ಛಿದ್ರಗೊಂಡಿದೆ. ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.