ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜ.೩೦ರಿಂದ ’ಜನರ ಬಳಿಗೆ ಸಚಿವ ಮಂಕಾಳ್ ವೈದ್ಯರ ನಡಿಗ” ಜನಸ್ಪಂಧನ ಕಾರ್ಯಕ್ರಮ

ಜ.೩೦ರಿಂದ ’ಜನರ ಬಳಿಗೆ ಸಚಿವ ಮಂಕಾಳ್ ವೈದ್ಯರ ನಡಿಗ” ಜನಸ್ಪಂಧನ ಕಾರ್ಯಕ್ರಮ

Tue, 30 Jan 2024 00:49:48  Office Staff   SOnews

 

ಭಟ್ಕಳ: ಮೀನುಗಾರಿಕಾ ಬಂದರು ಒಳನಾಡು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಜ.೩೦ ರಿಂದ "ಜನ ಸ್ಪಂದನಾ ಸಭೆ" ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

ವಿಧಾನಸಭಾ ಕ್ಷೇತ್ರದ ಗ್ರಾಮದಲ್ಲಿರುವ ಕುಂದು-ಕೊರತೆಗಳನ್ನ ಆಲಿಸಿ ಪರಿಹರಿಸುವುದಕ್ಕಾಗಿ,  ಪ್ರಥಮ ”ಜನಸ್ಪಂಧನ’  ಸಭೆ ಜ. ೩೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಿವಿನಾಯಕ ಸಭಾಭವನ ತೆಂಗಾರ ದಲ್ಲಿ ನಡೆಯಲಿದೆ.

ಆಯಾ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಪಂಚಾಯತಗೆ ನಿಗದಿಪಡಿಸಿದ ದಿನಾಂಕದಂದು ತಮ್ಮ ಊರಿನ ಕುಂದು-ಕೊರತೆಯ ಬಗೆಗೆ ಸಚಿವರಿಗೆ ತಿಳಿಸಿ ಸಮಸ್ಯೆಯನ್ನ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

 


Share: