ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೋಯಿಡಾದ ಬರಪಾಲಿ ಬಳಿ ಕರಡಿ ದಾಳಿ. ರೈತನಿಗೆ ಗಾಯ.

ಜೋಯಿಡಾದ ಬರಪಾಲಿ ಬಳಿ ಕರಡಿ ದಾಳಿ. ರೈತನಿಗೆ ಗಾಯ.

Sun, 03 Jul 2022 02:15:27  Office Staff   SO News

ಕಾರವಾರ : ಗದ್ದೆ ಕೆಲಸಕ್ಕೆ ಹೋಗಿದ್ದ ರೈತನೋರ್ವನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಜೋಯಿಡಾದಲ್ಲಿ ನಡೆದಿದೆ.

 ತಾಲೂಕಿನ ಬರಪಾಲಿ ಬಳಿ ಶನಿವಾರ ಘಟನೆ ನಡೆದಿದ್ದು, ಸಂದೀಪ ಅಣಶೀಕರ ಎಂಬುವವರ ಮೇಲೆ ದಾಳಿಯಾಗಿದ್ದು ತೀವೃ   ಗಾಯಗೊಂಡಿದ್ದಾರೆ. 

ಗಾಯಾಳುವಿಗೆ ಜೋಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


Share: