ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೋಯಿಡಾದಲ್ಲಿ ಅಬ್ಬರಿಸಿದ ವರುಣ. ಗ್ರಾಮಗಳ ಸಂಪರ್ಕ ಕಡಿತ.

ಜೋಯಿಡಾದಲ್ಲಿ ಅಬ್ಬರಿಸಿದ ವರುಣ. ಗ್ರಾಮಗಳ ಸಂಪರ್ಕ ಕಡಿತ.

Mon, 24 Jul 2023 04:57:27  Office Staff   SO News

ಜೋಯಿಡಾ : ತಾಲೂಕಿನಲ್ಲಿ ಸುರಿಯುತ್ತಿರುವ    ಅಬ್ಬರದ ಮಳೆಯಿಂದಾಗಿ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಕಾತೇಲಿ ಗ್ರಾಮ ಪಂಚಾಯತ್  ವ್ಯಾಪ್ತಿಯ ಕುಂಡಲ್ ಸೇತುವೆ ಮುಳುಗಿದ್ದರಿಂದ  ನವರ, ಕುರುವಾಲಿ,  ಆಂಬಾಳ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇಸರಿಂದ ರಬ್ಬರ್ ಬೋಟ್ ಮೂಲಕ ಗ್ರಾಮದ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮಳೆ ಹೆಚ್ಚಾದ ಪರಿಣಾಮವಾಗಿ ತಾಲೂಕಿನ ಕ್ಯಾಸಲರಾಕ್ ಸಂಪರ್ಕದ ಲಕ್ಷ್ಮೀ ವಾಡಾ ಸೇತುವೆ ಮುಳುಗಡೆಯಾಗಿದೆ‌. ಭಾನುವಾರ ಕ್ಯಾಸಲರಾಕ್ ಪ್ರದೇಶದಲ್ಲಿ 281.6ಮಿಲಿಮೀಟರ್ ಗರಿಷ್ಠ ಮಳೆ ದಾಖಲಾಗಿದೆ.


Share: