ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜೈಭೀಮ್ ಸಂಘಟನೆಯಿಂದ ಸಚಿವರ ಹುಟ್ಟುಹಬ್ಬಕ್ಕೆ ಪಠ್ಯ, ಸಿಹಿ ವಿತರಣೆ.

ಜೈಭೀಮ್ ಸಂಘಟನೆಯಿಂದ ಸಚಿವರ ಹುಟ್ಟುಹಬ್ಬಕ್ಕೆ ಪಠ್ಯ, ಸಿಹಿ ವಿತರಣೆ.

Mon, 05 Jun 2023 23:24:26  Office Staff   SO News

ಭಟ್ಕಳ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರ 50 ನೇ ಜನ್ಮ ದಿನಾಚರಣೆಯನ್ನ ಭಟ್ಕಳದ ಜೈಭೀಮ್ ಸಂಘಟನೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನೆಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಪೆನ್ನು ಹಾಗೂ ಸಿಹಿ ವಿತರಿಸಲಾಯಿತು. ಒಟ್ಟು 170 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಚಿವರ ಹುಟ್ಟುಹಬ್ಬದ ಪ್ರಯುಕ್ತ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜೈಭೀಮ್ ಸಂಘಟನೆ ಕಾನೂನು ಸಲಹೆಗಾರ ಗುರುದಾಸಿ ಮೊಗೇರ, ಸಂಚಾಲಕ ಗಣೇಶ ಮೊಗೇರ ಕರಿಕಲ್, ಚೆನ್ನಯ್ಯ ಮೊಗೇರ ಬೆಳ್ಕೆ, ರಾಮಾ ಮೊಗೇರ, ಭಾಸ್ಕರ ಮೊಗೇರ ಅಳ್ವೇಕೋಡಿ, ರಾಜೇಶ ಮೊಗೇರ ಬೆಳ್ಕೆ, ಯಶೋಧರ ಮೊಗೇರ , ಚೋಳರಾಜ ಮೊಗೇರ, ಕೇಶವ ಮೊಗೇರ, ಲೊಕೇಶ ಮೊಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು


Share: