ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜು.೯ರಂದು ರವಿವಾರ ಲಯನ್ಸ್ ಸ್ಪೋರ್ಟ್ಸ ಸೆಂಟರ್‌ನಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ಜು.೯ರಂದು ರವಿವಾರ ಲಯನ್ಸ್ ಸ್ಪೋರ್ಟ್ಸ ಸೆಂಟರ್‌ನಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

Sat, 08 Jul 2023 04:23:41  Office Staff   SOnews

ಭಟ್ಕಳ: ನಗರದ ಪಲ್ಸ್ ಹೆಲ್ತ್ ಕೇರ್ ಭಟ್ಕಳ ಹಾಗೂ ಶ್ರೀನಿವಾಸ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಡ್ ರಿಸರ್ಚ ಸೆಂಟರ್ ಸುರತ್ಕಲ್ ಇವರ ಸಹಯೋಗದೊಂದಿಗೆ ಜು.೯ರಂದು ರವಿವಾರ ನಗರದ ಲಯನ್ಸ್ ಸ್ಪೋರ್ಟ್ಸ ಸೆಂಟರ್‌ನಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪಲ್ಸ್ ಹೆಲ್ತ್ ಕೇರ್ ಸೆಂಟರಿನ ವೈದ್ಯ ಡಾ. ಝೀಬಾ ಎಂ. ಬಿಜಾಪುರ್ ಹೇಳಿದರು. 

ಅವರು ಪಲ್ಸ್ ಹೆಲ್ತ್ ಕೇರ್ ಸೆಂಟರಿನಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 
ಭಟ್ಕಳದಲ್ಲಿ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಮ್ಮ ಪಲ್ಸ್ ಹೆಲ್ತ್ ಕೇರ್ ಸೆಂಟರ್ ಆರಂಭವಾಗಿದ್ದು ಅದೇ ದಿನ ಬೆಳಿಗ್ಗೆ ಉದ್ಘಾಟನೆ ನಡೆಯಲಿದೆ. ನಂತರ ಬೆಳಿಗ್ಗೆ ೯ ಗಂಟೆಯಿAದ ಆರೋಗ್ಯ ಶಿಬಿರ ನಡೆಯಲಿದೆ ಎಂದರು. 

ಶ್ರೀನಿವಾಸ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಎಂಡ್ ರಿಸರ್ಚ ಸೆಂಟರ್ ಸುರತ್ಕಲ್ ಮೆಡಿಕಲ್ ಡೈರೆಕ್ಟರ್ ಡಾ. ಡೇವಿಡ್ ಎಂ.ರೊಸಾರಿಯೋ  ಅವರು ಮಾತನಾಡಿ ನಮ್ಮ ಆಸ್ಪತ್ರೆಯು ಭಟ್ಕಳದ ಜನತೆಗಾಗಿ ಅನೇಕ ರೀತಿಯ ಉತ್ತಮ ವೈದ್ಯಕೀಯ ಸೇವೆಯನ್ನು ನೀಡಲು ಪಲ್ಸ್ ಕೇರ್ ಸೆಂಟರಿನೊAದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಅದರ ಪೂರ್ವ ಭಾವಿಯಾಗಿ ಮೆಡಿಕಲ್ ಕ್ಯಾಂಪ್ ಮಾಡುತ್ತಿದ್ದೇವೆ. ಒಟ್ಟೂ ೧೧ ಮೆಡಿಕಲ್ ಕ್ಯಾಂಪ್‌ಗಳನ್ನು ಬೇರೆ ಬೇರೆ ಕಡೆಗಳಲ್ಲಿ ಮಾಡಲು ತೀರ್ಮಾನಿಸಲಾಗಿದ್ದು ನಮ್ಮ ಉಚಿತ ಆರೋಗಯ ಶಿಬಿರದಲ್ಲಿ ನುರಿತ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ನೀಡುವ ವೈದ್ಯರು, ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ ಎಂದರು. ಇಲ್ಲಿ ಮೆಡಿಕಲ್ ಕ್ಯಾಂಪ್‌ಗೆ ಬಂದವರಿಗೆ ಆಸ್ಪತ್ರೆಯ ವತಿಯಿಂದ ಒಂದು ಕಾರ್ಡ ನೀಡಲಾಗುತ್ತಿದ್ದು ಕಾರ್ಡ ಹೊಂದಿದವರಿಗೆ ಒಂದು ತಿಂಗಳ ತನಕ ಯಾವುದೇ ಚಿಕಿತ್ಸೆಯನ್ನು ತಮ್ಮ ಆಸ್ಪತ್ರೆಯಲ್ಲಿ ಪಡೆದರೆ ಶೇ.೫೦ ರಿಯಾಯಿತಿ ನೀಡಲಾಗುವುದು ಎಂದೂ ಹೇಳಿದರು. ಜನತೆಗೆ ಉತ್ತಮ ಸೇವೆ ನೀಡುವ ಉದ್ದೇಶವನ್ನಿಟ್ಟುಕೊಂಡು ಭಟ್ಕಳಕ್ಕೆ ಆಗಮಿಸುತ್ತಿದ್ದು ಪ್ರತಿ ವಾರವೂ ಕೂಡಾ ತಜ್ಞ ಹಿರಿಯ ವೈದ್ಯರು ಭೇಟಿ ನೀಡಲಿದ್ದಾರೆ ಎಂದರು. 

ಉಪಸ್ಥಿತರಿದ್ದ ಫ್ರೀಡಾ ಡಿಸೋಜ ಮಾತನಾಡಿ ಭಟ್ಕಳದಲ್ಲಿ ಪಲ್ಸ್ ಹೆಲ್ತ್ ಸೆಂಟರ್ ಉತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದಲೇ ಆರಂಭವಾಗುತ್ತಿದ್ದು ಮಂಗಳೂರಿನಿAದ ನುರಿತ ಸಿಬ್ಬಂದಿಗಳು ಇಲ್ಲಿ ಇರಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ನೀಡಲು ನಾವು ಮುಂದಾಗಿದ್ದು ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನ ಎಲ್ಲರೂ ಪಡೆಯುವಂತಾಗಬೇಕು. ಇನ್ನೂ ಕೂಡಾ ಅನೇಕ ಮೆಡಿಕಲ್ ಕ್ಯಾಂಪ್‌ಗಳನ್ನು ಮಾಡುವವರಿದ್ದು ಅಗತ್ಯವಿದ್ದವರು ಕ್ಯಾಂಪ್‌ನಲ್ಲಿ ದೊರೆಯುವ ಉಚಿತ ತಪಾಸಣೆ, ಔಷಧ ಸೇರಿದಂತೆ ಎಲ್ಲಾ ಸೇವೆಗಳನ್ನು ಪಡೆಯುವಂತೆಯೂ ಕೋರಿದರು. 

ಈ ಸಂದರ್ಭದಲ್ಲಿ ಇರ್ಷಾದ್ ಉಪಸ್ಥಿತರಿದ್ದರು. 
 
 


Share: