ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜುಲೈ 31ರಂದು ಪಿಂಚಣಿ ಅದಾಲತ್

ಜುಲೈ 31ರಂದು ಪಿಂಚಣಿ ಅದಾಲತ್

Sat, 29 Jul 2023 02:18:40  Office Staff   SO News

ಕಾರವಾರ :  ನಗರದ ಅಂಚೆ  ವಿಭಾಗದಲ್ಲಿ  ಪಿಂಚಣಿ ಅದಾಲತನ್ನು ಜುಲೈ 31 ರಂದು ಮದ್ಯಾಹ್ನ 03.00 ಗಂಟೆಗೆ  ಕಾರವಾರ ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.    

ಕಾರವಾರ ವಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಅಂಚೆ ಪಿಂಚಣಿದಾರರು ಮಾತ್ರ ಇದರಲ್ಲಿ  ಪಾಲ್ಗೊಳ್ಳಬೇಕು. ಗ್ರಾಮೀಣ ಅಂಚೆ ಸೇವಕರಗಲಿ ಅಥವಾ  ಅಂಚೆ ಇಲಾಖೆಯ ಮೂಲಕ  ಪಿಂಚಣಿ  ಪಡೆಯುತ್ತಿರುವವರು ಈ ಅದಾಲತ್‌ನಲ್ಲಿ ಭಾಗವಹಿಸುವಂತಿಲ್ಲ.

ಪಿಂಚಣಿ ಅದಾಲತ್‌ನಲ್ಲಿ ತಮಗೆ ಬಂದಿರುವ ಸಮಸ್ಯೆಗಳನ್ನು  ಲಿಖಿತವಾಗಿ ಎಲ್ಲ ವಿವರಗಳೊಂದಿಗೆ  ತಾವುಗಳು  ಪಿಂಚಣಿ ಪಡೆದುಕೊಳ್ಳುತ್ತಿರುವ ಅಂಚೆ ಕಚೇರಿಗೆ  ಜುಲೈ  31 ರೊಳಗಾಗಿ  ತಲುಪುವ ಹಾಗೇ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-221431 ಗೆ ಸಂಪರ್ಕಿಸಿ ಎಂದು ಅಂಚೆ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Share: