ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾಗಿ ಖ್ಯಾತ ವೈದ್ಯ ಡಾ. ಸಾದ್ ಬೆಲ್ಗಾಮಿ ಮರು ಆಯ್ಕೆ

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾಗಿ ಖ್ಯಾತ ವೈದ್ಯ ಡಾ. ಸಾದ್ ಬೆಲ್ಗಾಮಿ ಮರು ಆಯ್ಕೆ

Wed, 10 May 2023 23:29:03  Office Staff   SOnews

ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಡಾ.ಮುಹಮ್ಮದ್ ಸಾದ್ ಬೆಳಗಾಮಿ ಪುನರಾಯ್ಕೆಯಾಗಿದ್ದಾರೆ. 2019-2023 ರವರೆಗೆ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಬೆಳಗಾಮಿಯವರನ್ನು ಜಮಾಅತ್ ರಾಷ್ಟ್ರಾಧ್ಯಕ್ಷ ಸಯ್ಯದ್ ಸಾದಾತುಲ್ಲಾ ಹುಸೈನಿ ಪುನರ್ ಆಯ್ಕೆ ಮಾಡಿದ್ದಾರೆ.

ಡಾ. ಬೆಳಗಾಮಿಯವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಯೂರೋಲಾಜಿಸ್ಟ್ ಮತ್ತು ಜನರಲ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಅವರು ಮೈಸೂರು ಮತ್ತು ಲಂಡನ್ (FRCS) ನಲ್ಲಿ ಉನ್ನತ ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ.

ಕುರ್'ಆನ್ ಡಾ. ಬೆಳಗಾಮಿಯವರ ಆಸಕ್ತಿಯ ವಿಚಾರವಾಗಿದ್ದು, ಚಿಂತಕರಾಗಿಯೂ ಪ್ರಸಿದ್ದರಾಗಿದ್ದಾರೆ. ಸಮಕಾಲೀನ ವಿಷಯಗಳ ಮೇಲೆ  ಗಹನವಾದ ಅಧ್ಯಯನವನ್ನು ಹೊಂದಿದ ಅವರು ಉತ್ತಮ ಸಂಘಟಕರೂ ಆಗಿದ್ದಾರೆ.

ಅವರ ರಾಜ್ಯಾಧ್ಯಕ್ಷ ಅವಧಿಯು 4 ವರ್ಷಗಳು ಅಂದರೆ 2027ರವರೆಗೆ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.


Share: