ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಮಾಅತೆ ಇಸ್ಲಾಮಿ ಹಿಂದ್‌ನ ಮಾಜಿ ರಾಷ್ಟ್ರಾಧ್ಯಕ್ಷ ಜಲಾಲುದ್ದೀನ್‌ ಉಮರಿ ನಿಧನ

ಜಮಾಅತೆ ಇಸ್ಲಾಮಿ ಹಿಂದ್‌ನ ಮಾಜಿ ರಾಷ್ಟ್ರಾಧ್ಯಕ್ಷ ಜಲಾಲುದ್ದೀನ್‌ ಉಮರಿ ನಿಧನ

Sat, 27 Aug 2022 16:29:47  Office Staff   Vb

ಹೊಸದಿಲ್ಲಿ: ಜಮಾಅತೆ-ಇಸ್ಲಾಮಿ ಹಿಂದ್ ಇದರ ಮಾಜಿ ರಾಷ್ಟ್ರಾಧ್ಯಕ್ಷ ಮತ್ತು ಖ್ಯಾತ ಮುಸ್ಲಿಮ್ ವಿದ್ವಾಂಸ ಮೌಲಾನಾ ಜಲಾಲುದ್ದೀನ್ ಉಮರಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೌಲಾನಾ ಜಲಾಲುದ್ದೀನ್ ಉಮರಿ ಅವರು 2007ರಿಂದ 2019ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಇದರ ರಾಷ್ಟ್ರಾಧ್ಯಕ್ಷ ಆಗಿದ್ದರು.

ತಮಿಳುನಾಡಿನ ಉತ್ತರಆರ್ಕಾಟ್ ಜಿಲ್ಲೆಯ ಗ್ರಾಮವೊಂದರಲ್ಲಿ 1935ರಲ್ಲಿ ಜನಿಸಿದ ಅವರು ತಮಿಳುನಾಡಿನ ಉಮರಾಬಾದ್‌ನ ಜಾಮಿಯಾ ದಾರುಸ್ಸಲಾಮ್‌ನಲ್ಲಿ ಪದವಿ ಪಡೆದರು. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದರು. ಸತತ ನಾಲ್ಕು ಅವಧಿಗೆ ಜಮಾಅತೆ ಇಸ್ಲಾಮಿ ಹಿಂದ್‌ನ ರಾಷ್ಟ್ರಾಧ್ಯಕ್ಷ ಸೇವೆಸಲ್ಲಿಸಿದ್ದ ಅವರು, ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.


Share: