ಮಂಗಳೂರು ಏಪ್ರಿಲ್ ೨೭: ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮೇ/ಜೂನ್ ತಿಂಗಳಲ್ಲಿ ನಡೆಸಲುದ್ದೇಶಿಸಿದ್ದ ಬಿ.ಎ/ಬಿ.ಕಾಂ ಪರೀಕ್ಷೆ ವೇಳಾಪಟ್ಟಿ ಗ್ರಾಮಪಂಚಾಯಿತಿ ಚುನಾವಣೆ ಪ್ರಯುಕ್ತ ನಾಲ್ಕು ದಿನಾಂಕಗಳಲ್ಲಿ ಬದಲಾವಣೆಯಾಗಿದೆ.
ಮೇ೭ರಂದು ನಿಗದಿಯಾಗಿದ್ದ ಇಂಗ್ಲಿಷ್ (ಭಾಷಾ ಪರೀಕ್ಷೆ), ಇಂಗ್ಲಿಷ್ (ಆಪ್ಷನಲ್) ಮತ್ತು ಕಾಸ್ಟ ಅಕೌಂಟಿಂಗ್ ಜೂನ್ ೫ಕ್ಕೆ ಮುಂದೂಡಲ್ಪಟ್ಟಿದೆ. ಮೇ ೮ರಂದು ನಿಗದಿಪಡಿಸಿದ್ದ ದ್ವಿತಿಯಾ ಬಿಎ/ಬಿಕಾಂ, ಅಂತಿಮ ಬಿ ಎ ಇಂಗ್ಲಿಷ್ (ಭಾಷಾ ಪರೀಕ್ಷೆ), ಇಂಗ್ಲಿಷ್ (ಆಪ್ಷನಲ್) ಜೂನ್ ೭ಕ್ಕೆ ಮುಂದೂಡಲಾಗಿದೆ. ಮೇ ೧೧ರಂದು ನಿಗದಿಪಡಿಸಿದ ಪ್ರಥಮ ಬಿಎ, ಬಿ.ಕಾಂ, ಅಂತಿಮ ಬಿ ಎ,ಬಿ.ಕಾಂ ಹಿಂದಿ (ಭಾಷೆ), ಹಿಂದಿ (ಆಪ್ಷನಲ್), ಮ್ಯಾನೇಜ್ ಮೆಂಟ್ ಅಕೌಂಟಿಂಗ್ ಜೂನ್ ೮ರಂದು ಮರು ನಿಗದಿಪಡಿಸಲಾಗಿದೆ. ದ್ವಿತೀಯ ಬಿಎ, ಬಿಕಾಂ, ಅಂತಿಮ ಬಿ ಎಹಿಂದಿ (ಭಾಷೆ), ಇತಿಹಾಸ (III) ಮೇ೧೨ರಂದು ನಿಗದಿಯಾದದ್ದು ಜೂನ್ ೯ಕ್ಕೆ ಬದಲಾಗಿದೆ.
ಈ ಸಂಬಂಧ ಮಾಹಿತಿಯನ್ನು ಪರೀಕ್ಷಾ ದಿನಾಂಕಗಳ ತರಗತಿ ಹಾಗೂ ವಿಷಯವಾರು ಮಾಹಿತಿಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆ ಆರಂಭಿಸುವ ಮೊದಲು ಪ್ರತಿನಿತ್ಯ ಪರೀಕ್ಷಾ ಕೊಠಡಿಗಳಲ್ಲಿ ಘೋಷಿಸುವುದರೊಂದಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಕಟಣಾ ಫಲಕಗಳಲ್ಲಿ ಲಿಖಿತ ಮಾಹಿತಿ ನೀಡಲಾಗುವುದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕುಲಸಚಿವ (ಪರೀಕ್ಷಾಂಗ) ಫೋನ್ ೦೮೨೧-೨೫೧೯೯೪೨ ಅಥವಾ www.ksoumysore.com ನ್ನು ಸಂಪರ್ಕಿಸಬಹುದು.