ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಚುನಾವಣೆಯ ಮೂಲಕ‌ ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಪದಾಧಿಕಾರಿ ಆಯ್ಕೆ.

ಚುನಾವಣೆಯ ಮೂಲಕ‌ ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಪದಾಧಿಕಾರಿ ಆಯ್ಕೆ.

Sun, 31 Dec 2023 05:50:11  Office Staff   SO News

ಭಟ್ಕಳ: ಭಟ್ಕಳದ ಶಾಹೀನ್ ಸ್ಪೋರ್ಟ್ಸ್ ಸೆಂಟರ್ (ಶಾಹೀನ್ ಮಖ್ದೂಮ್) ಇದರ ನೂತನ ಪದಾಧಿಕಾರಿಗಳ ನೇಮಕ ಭಟ್ಕಳದ ಮಖ್ದೂಮ್ ಕಾಲೋನಿಯ ಫಾತಿಮಾ ಅಲಿ ಸಭಾಂಗಣದಲ್ಲಿ ಚುನಾವಣೆ ಮೂಲಕ ನಡೆಯಿತು.

ಚುನಾವಣೆಯಲ್ಲಿ ಸಮುದಾಯದ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಒಟ್ಟು  22 ಸದಸ್ಯರು ಕಾರ್ಯಕಾರಿ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದರು.

  ಸೈಯದ್ ಶಾದಾಬ್ SM (M.Pharma) ಸ್ಪೋರ್ಟ್ಸ್ ಸೆಂಟರ್‌ನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.
ಹೊಸ ಪ್ರಧಾನ ಕಾರ್ಯದರ್ಶಿ ಮೌಲವಿ ಶಾಹೀರ್ ಫಕಡೇರಿ ಆಯ್ಕೆಯಾದರು.

  ಕ್ರೀಡಾ ಕೇಂದ್ರಕ್ಕೆ ಆಯ್ಕೆಯಾದ ಪ್ರಮುಖ ಪದಾಧಿಕಾರಿಗಳು  ಸೈಯದ್ ಶಾದಾಬ್ ಎಸ್.ಎಂ. ಅಧ್ಯಕ್ಷರಾಗಿ, ಮೌಲವಿ ಮುಹಮ್ಮದ್ ಮುಝಮ್ಮಿಲ್ ಹಳ್ಳಾರೆ ಉಪಾಧ್ಯಕ್ಷರಾಗಿ, ಮೌಲವಿ ಶಾಹೀರ್ ಅಹ್ಮದ್ ಫಕರಡೆ ಪ್ರಧಾನ ಕಾರ್ಯದರ್ಶಿಯಾಗಿ, ಮೌಲವಿ ಮಹಮ್ಮದ್ ಅಬಾನ್ ಜುಬಾಪು ಕಾರ್ಯದರ್ಶಿಯಾಗಿ, ನ್ಯಾಯವಾದಿ ಅಬ್ದುಲ್ ಬಾಕಿ ಸಿದ್ದೀಕ್ ಲೆಕ್ಕಪರಿಶೋಧಕರಾಗಿ,  ಮುಹಮ್ಮದ್ ಝರಾರ್ ಸಾರಾ ಖಜಾಂಚಿಯಾಗಿ,  ರಹಮತುಲ್ಲಾ ಅಲಂಗಾರ್ ಕ್ರೀಡಾ ಕಾರ್ಯದರ್ಶಿಯಾಗಿ ಆಯ್ಕೆಯಾದರು.


Share: