ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ:ಪ್ರಾಣಾಪಾಯದಿಂದ ಪಾರಾದ ಚಾಲಕ

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿ:ಪ್ರಾಣಾಪಾಯದಿಂದ ಪಾರಾದ ಚಾಲಕ

Wed, 23 Aug 2023 06:03:31  Office Staff   SO News

ಭಟ್ಕಳ:ಲಾರಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ವೆಂಕಟಾಪುರದಲ್ಲಿ ಬ್ರಿಡ್ಜ್ ಬಳಿ ನಡೆದಿದೆ. 

ಮಂಗಳೂರಿನಿಂದ ಬಳ್ಳಾರಿ ಹೊಸಪೇಟೆ ಕಡೆಗೆ ಹೋಗುತ್ತಿದ್ದ  ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ವೆಂಕಟಾಪುರ ನದಿಗೆ ಹಾಕಿರುವ ತಡೆಗೋಡೆ ಢಿಕ್ಕಿ ಹೊಡೆದ ಪರಿಣಾಮ ಲಾರಿಯ ಮದ್ಯಭಾಗ ಸೇತುವೆಗೆ ಸಿಲುಕಿ ಹಾಕಿಕೊಂಡಿದ್ದು ಅದ್ರಷ್ಟವಶ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಪಘಾತದಲ್ಲಿ ಸೇತುವೆ ತಡೆಗೋಡೆ ಲಾರಿಯನ್ನು ನದಿಗೆ ಬೀಳದಂತೆ ರಕ್ಷಣೆ ಮಾಡಿದೆ 

ಈ ಸ್ಥಳದಲ್ಲಿ ಈಗಾಗಲೇ ಹಲವು ಬಾರಿ ಅಪಘಾತ ಸಂಭವಿಸಿದ್ದು ಸದ್ಯ ಅಪಘಾತ ಸ್ಥಳವಾಗಿ ಮಾರ್ಪಾಡಾಗಿದೆ. ಭಟ್ಕಳದಿಂದ ವೆಂಕಟಾಪುರ ಸೇತುವೆ ಬಳಿ ಬರುವ ಮುನ್ನ ರಸ್ತೆ ದೊಡ್ಡದಾಗಿದ್ದು ಸೇತುವೆ ಬಳಿ ಬರುಬರುತ್ತಾ ರಸ್ತೆ ಕಿರುದಾಗಿರುವುದು ಕೂಡ  ಅಪಘಾತ ಸಂಭವಿಸಲು ಇನ್ನೊಂದು ಕಾರಣವಾಗಿದೆ.


Share: