ಭಟ್ಕಳ : ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರುವ ಘಟನೆ ಮೂಡ ಭಟ್ಕಳ ಟಾಪ್ ಲಾಡ್ಜ ಸಮೀಪದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ.
ರಾತ್ರಿ ಸುರಿದ ಮಳೆಯಲ್ಲಿ ಸಂಚರಿಸುವಾಗ ಕೆಎಸ್ ಆರ್ ಟಿಸಿ ಬಸ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ
ಮೆಕ್ಕೆಜೋಳ ಸಾಗಿಸುವ ಲಾರಿ ಪಲ್ಟಿಯಾಗಿದೆ.
ಲಾರಿ ಪಲ್ಟಿಯಾದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ ಚಾಲಕ ಮಾರುತಿ ತಿಪ್ಪಣ್ಣ ವಡ್ಡರ ಹಾನಗಲ್ ನಿವಾಸಿ ಅಸ್ತವ್ಯಸ್ತಗೊಂಡಿದ್ದು, ಹಾಗೂ ಕ್ಲೀನರ್ ಮನೋಜ್ ಮಲಕಪ್ಪ ಬೊಮ್ಮನಹಳ್ಳಿ ಅಪಾಯದಿಂದ ಪಾರಾಗಿದ್ದಾರೆ.
ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
112 ವಾಹನ ಹಾಗೂ ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ಸ್ಥಳಕ್ಕೆ ತೆರಳಿ ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿ.ಎಸ್.ಐ ಗಣೇಶ ನಾಯ್ಕ ಹಾಗೂ ನಗರ ಠಾಣೆ ಎ.ಎಸ್.ಐ ನವೀನ ಬೋರ್ಕರ್,ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.