ಕಾರವಾರ: ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಮ್ ರವರ ಅಧ್ಯಕ್ಷತೆಯಲ್ಲಿ ಕುಂದು ಕೊರತೆ ಕುರಿತು ಆಲಿಸುವ ಸಭೆ ಬುಧವಾರ ನಡೆಯಿತು.
ಸಭೆಯಲ್ಲಿ ಸಿಬ್ಬಂದಿಗಳಿಂದ ಅಹವಾಲು ಆಲಿಸಿ ವೇತನಕ್ಕೆ ಸಂಬಂಧಿಸಿದಂತೆ ಮುಂಡಗೋಡ ಹಳಿಯಾಳ ತಾಲೂಕಿನ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ವೇತನ ಬಾಕಿ ಇರುವುದು ಗಮನಿಸಲಾಗಿದೆ. ಹಾಗೂ ಪಂಚಾಯತನಲ್ಲಿ 5 ಸಿಬ್ಬಂದಿಗಳಿಗೆ ಮಾತ್ರ ಅನುಮೋದನೆ ನೀಡಲು ಸರ್ಕಾರದ ಆದೇಶವಿದೆ. ಅದರಂತೆ ಸಿಬ್ಬಂದಿಗಳ ವೇತನಕ್ಕೆ ಮೀಸಲಿರಿಸಲು ಈ ಬಾರಿ ಮುಂಡಗೋಡ ಹಳಿಯಾಳ ತಾಲೂಕಿನ ಗ್ರಾಮ ಪಂಚಾಯತ್ ಗಳ 15ನೇ ಹಣಕಾಸಿನ ಕ್ರಿಯಾ ಯೋಜನೆ ಯನ್ನು ಜಿಲ್ಲಾ ಪಂಚಾಯತಕ್ಕೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸೂಚಿಸಲಾಗುವುದು ಎಂದರು.
ಗ್ರಾಮ ಪಂಚಾಯತ್ ಸಿಬ್ಬಂದಿಗಳ ಜೇಷ್ಠತಾ ಪಟ್ಟಿಯನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು. ESI PF ಬಗ್ಗೆ ಮಾತನಾಡಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಮಾತ್ರ ಈ ಹಿಂದೆ ಕಡಿತಗೊಳಿಸಲಾಗುತ್ತಿದ್ದು ಅದರಲ್ಲಿಯೂ ಏಜನ್ಸಿರವರು ಸರಿಯಾಗಿ ವೈಯಕ್ತಿಕ ಖಾತೆಗಳಿಗೆ ಭರಣ ಆಗದೇ ಇರುವುದು ಕಂಡುಬಂದಿದೆ. ಆದರೆ ಇದರಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆಗಳು ಇರುತ್ತಿದ್ದು, ವೇತನದಲ್ಲಿ ಕಡಿತಗೊಳಿಸಿ ನಂತರದಲ್ಲಿ ಯಾರಿಂದ ಭರಿಸಬೇಕು ಎನ್ನುವುದು ಸರಿಯಾದ ಮಾರ್ಗಸೂಚಿ ಇರದ ಕಾರಣ ಪಂಚಾಯತ ಸಿಬ್ಬಂದಿಗಳಿಗೆ ಈ ಬಗ್ಗೆ ಸಮಸ್ಯೆಯಾಗುತ್ತಿದೆ. ಈ ಕುರಿತು ಸಂಬಂದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಸೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.
ಕೆಲವು ಪಂಚಾಯತಗಳಲ್ಲಿ ಕನಿಷ್ಠ ವೇತನ ನೀಡಲಾಗುತ್ತಿಲ್ಲ ಎಂಬ ಅಹವಾಲಿಗೆ ಅದಕ್ಕಾಗಿಯೇ ಸರ್ಕಾರದಿಂದ ಇಎಫ್ ಎಮ್ ಎಸ್ ನಲ್ಲಿ ಸಿಬ್ಬಂದಿಗಳ ಮಾಹಿತಿಯನ್ನು ಇಂದಿಕರಿಸಲು ಆದೇಶವಿದ್ದು, ಇದರಿಂದ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಾಗುತ್ತದೆ ಎಂದರು. ಇ ಎಪ್ ಎಮ್ ಎಸ್ ಎಂಟ್ರಿ ಮಾಡದೇ ಉಳಿದ ಸಿಬ್ಬಂದಿಗಳಿಗೆ ಹೇಗೆ ವೇತನ ನೀಡುವುದು ಎಂದು ಸರ್ಕಾರದಿಂದ ಮಾರ್ಗಸೂಚಿ ಬರಬೇಕಾಗಿದೆ ಅದರಂತೆ ಕ್ರಮವಹಿಸಿಲಾಗುವುದು.
ಇನ್ನೂ ಕೆಲವು ಸಿಬ್ಬಂದಿಗಳು ಗ್ರಾಮ ವ್ಯಾಪ್ತಿಯಲ್ಲಿ ಕಚೇರಿ ಕೆಲಸಗಳಿಗೆ ದೂರದ ಸ್ಥಳಗಳಿಗೆ ತೆರಳುವಾಗ ವೆಚ್ಚವನ್ನು ಭರಿಸಲು ಅವಕಾಶ ನೀಡಲು ಕೋರಿದರು. ಈ ಬಗ್ಗೆ ಇಂಧನ ವೆಚ್ಚದಲ್ಲಿ ಇದನ್ನು ಭರಿಸಿಕೊಳ್ಳಲು ಅವಕಾಶವಿದ್ದರೇ ಅದನ್ನು ಕಾಯ್ದಿರಿಸಿಕೊಂಡು ಭರಿಸುವುದು ಎಂದರು.
ಕ್ರೀಡಾ ಕೂಟ ನಡೆಸುವ ಬಗ್ಗೆ ತಾಲೂಕು ಮಟ್ಟದಲ್ಲಿ ಮೇ ತಿಂಗಳಲ್ಲಿ ನಡೆಸುವ ಬಗ್ಗೆ ಎಲ್ಲಾ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. ಇನ್ನುಳಿದಂತೆ ಯಾವುದೇ ಸಿಬ್ಬಂದಿಗಳಿಗೆ ಕಾನೂನು ಬಾಹಿರವಾಗಿ ಏನಾದರೂ ಕ್ರಮ ಕೈಗೊಂಡಲ್ಲಿ ನೇರವಾಗಿ ಸಿಇಓ ಗಮನಕ್ಕೆ ತರಲು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.
ಈ ವೇಳೆ ಉಪ ಕಾರ್ಯದರ್ಶಿ (ಅಭಿವೃದ್ಧಿ) ಸಹಾಯಕ ಕಾರ್ಯದರ್ಶಿ, ಜಿ.ಪಂ. ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.