ಕಾರ್ಕಳ: ಇಲ್ಲಿನ ಕಾಳಿಕಾಂಬ ಜ್ಯೋತಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಇದರ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ನ್ಯಾಯವಾದಿ ಎಮ್.ಕೆ.ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭಾಧ್ಯಕ್ಷ ಸುಬಿತ್ ಎನ್.ಆರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೂಪ ಜೈನ್, ಉದ್ಯಮಿ ಚಂದ್ರಶೇಖರ್ ಹೆಗ್ಡೆ, ಗೋವಿಂದ ರಾವ್, ರವೀಂದ್ರನಾಥ ಹೆಗ್ಡೆ, ರಮೇಶ್ ದೇವಾಡಿಗ, ಸುರೇಶ್ ದೇವಾಡಿಗ, ಬೇಬಿ ಎಸ್, ಶುಬದ ರಾವ್ ಮತ್ತಿತರರು ಉಪಸ್ಥಿತರಿದ್ದರು.
-----------
ಕಾರ್ಕಳ: ಉಡುಪಿ ಲ್ಯಾಂಕೋ ಫೌಂಡೇಶನ್ ಕೃತಕ ಅವಯವ ಜೋಡಣಾ ಕೇಂದ್ರ ಹಾಗೂ ಜೇಸಿಐ ಕಾರ್ಕಳ ಮತ್ತು ಜೇಸಿಐ ಪಡುಬಿದ್ರಿ ಇವರ ಸಂಯೋಜನೆಯೋಂದಿಗೆ ವಿಕಲಚೇತನರ ಸೇವಾ ಟ್ರಸ್ಟ್ ಕಾರ್ಕಳ ಇವರ ಸಹಭಾಗಿತ್ವದಲ್ಲಿ ಅಂಗವಿಕಲರ ಉಚಿತ ತಪಾಸಣಾ ಶಿಬಿರ ಮಾ.೫ರಂದು ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
-------------
ಕಾರ್ಕಳ: ಬೋಳ ಮತ್ತು ಕಾಂತಾವರ ಗ್ರಾಮ ಪಂಚಾಯತ್‌ಗಳ ಸುವರ್ಣ ಗ್ರಾಮೋದಯ ಯೋಜನೆಗಳ ಶಂಕು ಸ್ಥಾಪನಾ ಸಮಾರಂಭವು ಬೋಳ ವಂಜಾರಕಟ್ಟೆ ಅನುದಾನಿತ ಹಿ.ಪ್ರಾ.ಶಾಲೆಯ ವಠಾರದಲ್ಲಿ ಮಾ.೬ರಂದು ನಡೆಯಲಿದೆ.
ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವರಾಜ್ ಎಸ್.ತಂಗಡಗಿ, ಗೃಹ ಸಚಿವ ವಿ.ಎಸ್.ಆಚಾರ್ಯ, ಸಾಂಸದ ಡಿ.ವಿ.ಸದಾನಂದ ಗೌಡ, ಶಾಸಕ ಗೋಪಾಲ ಭಂಡಾರಿ, ವಿಧಾನ ಪರಿಷತ್ ಸದಸ್ಯರು, ಜಿ.ಪಂ., ತಾ.ಪಂ.,ನ ಅಧ್ಯಕ್ಷರುಗಳು,ಸದಸ್ಯರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
------------
ಕಾರ್ಕಳ: ಶಶಿಕಾಂತ ಶೆಟ್ಟಿ ಸನ್ಮಾನ ಸಮಿತಿ ಕಾರ್ಕಳ ಇದರ ವತಿಯಿಂದ ಯಕ್ಷಗಾನ ಕಲಾವಿದ ಶಶಿಕಾಂತ ಶೆಟ್ಟಿರವರಿಗೆ ಮಾ.೬ರಂದು ಯಕ್ಷ-ಚಂದ್ರಿಕೆ ಬಿರುದು ಸಹಿತ ರಜತ ಮಾನಪತ್ರದೊಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಜೇಸಿಸ್ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ತಿಳಿಸಿದರು.
ಅವರು ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಾರ್ಕಳದ ಗಾಂಧಿ ಮೈದಾನದಲ್ಲಿ ಶನಿವಾರ ಸಾಲಿಗ್ರಾಮ ಮೇಳದವರಿಂದ ಅಟ್ಟಳಿಗೆ ಯಕ್ಷಗಾನ ಕಾರ್ತವೀರ್ಯ-ದಕ್ಷಾಧ್ವರ-ಶ್ರೀನಿವಾಸ ಕಲ್ಯಾಣ ಎಂಬ ಯಕ್ಷಗಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಕಲಾವಿದ ಶಶಿಕಾಂತ ಇವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ರಾಜ್ಯ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಕುಂಬ್ಳೆ ಸುಂದರ ರಾವ್, ಶಾಸಕ ಗೋಪಾಲ ಭಂಡಾರಿ, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಾತನಯನ ಮುದ್ರಾಡಿ, ಪ್ರದೀಪ್ ಕುಮಾರ್ ಕಲ್ಕೂರ, ಪುರಸಭಾ ಅಧ್ಯಕ್ಷ ಸುಬಿತ್ ಎನ್.ಆರ್, ಕದ್ರಿ ನವನೀತ ಶೆಟ್ಟಿ, ಮಸ್ಕತ್‌ನ ಅಭಿಮಾನಿಗಳು ಮತ್ತಿತರರು ಭಾಗವಹಿಸಲಿರುವರು ಎಂದರು.
ಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಸುಬಿತ್ ಕುಮಾರ್ ಉಪಸ್ಥಿತರಿದ್ದರು.