ಜೋಯಿಡಾ : ಬೆಳಗಾವಿಯಿಂದ ಗೋವಾ ಸಂಪರ್ಕಿಸುವ ಅನ್ಮೋಡ್ ಘಟ್ಟದ ಬಳಿ ಸೋಮವಾರ ಬಾರೀ ಭೂ ಕುಸಿತ ಉಂಟಾಗಿದೆ.
ಬಾರೀ ಪ್ರಮಾಣದ ಕಲ್ಲು, ಮಣ್ಣುಮರಗಳೊಂದಿಗೆ ಧರೆಗುರುಳಿದೆ. ಪರಿಣಾಮವಾಗಿ ರಸ್ತೆ ಸಂಚಾರ ಅಸ್ಥವ್ಯಸ್ಥವಾಗಿದೆ. ಗೋವಾದಿಂದ ಬೆಳಗಾವಿ ರಸ್ತೆಯಾಗಿದ್ದು, ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ತೊಡಕಾಗಿದೆ. ರಾಷ್ಟ್ರೀಯ ಹೆದ್ದಾರಿ 4ಎ ದಲ್ಲಿ ಘಟನೆ ನಡೆದಿದೆ.
ಸ್ಥಳಕ್ಕೆ ರಕ್ಷಣಾ ಸಿಬ್ಬಂದಿಗಳು ತೆರಳಿ ತೆರವುಗೊಳಿಸಲು ಮುಂದಾಗಿದ್ದಾರೆ.