ಕಾರವಾರ : ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವವರ ಮೇಲೆ ರಾಜೀಯಾಗುವ ಪ್ರಶ್ನೆಯೇ ಇಲ್ಲ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಅವರು ಮಾತನಾಡಿದರು.
ಪೋಲಿಸ್ ಠಾಣೆಗಳಿಗೆ ಕಲ್ಲು ಹೊಡೆಯುವವರು, ಬೆಂಕಿ ಹಚ್ಚುವ ಕೆಲಸ ಮಾಡುವವರು ಯಾರು ಮುಗ್ದರಲ್ಲ. ಯಾರು ಕಲ್ಲು ಹೊಡಿತಾರೆ, ಯಾರು ಅಮಾಯಕರ ಮೇಲೆ ದೌರ್ಜನ್ಯ ಮಾಡ್ತಾರೆ. ಯಾರು ಬೆಂಕಿ ಹಚ್ತಾರೆ. ಅಂತಹವರನ್ನ ನಿರ್ಬಂಧಿಸುವ ತಾಕತ್ತು ಸರ್ಕಾರಕ್ಕೆ ಇದೆ ಎಂದು ಪೂಜಾರಿ ಹೇಳಿದ್ದಾರೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಸೇರಿದಂತೆ ಹುಬ್ಬಳ್ಳಿಯಲ್ಲಿ ಯಾರ ಯಾರು ಪೊಲೀಸ್ ದೌರ್ಜನ್ಯ ಮಾಡಿದ್ದಾರೆ. ಕಲ್ಲು ಸಂಗ್ರಹ ಮಾಡಿದ್ದಾರೆ. ಸಮಾಜದ ಶಾಂತಿ ಹಾಳು ಮಾಡಿದ್ದಾರೆ, ಕಾನೂನನ್ನು ಕೈಗೆ ಎತ್ತಿಕೊಂಡಿದ್ದಾರೆ ಅಂತವರನ್ನ ಮುಲಾಜಿಲ್ಲದೆ ಒಳಗೆ ಹಾಕುತ್ತೇವೆ ಸಚಿವರು ಖಡಕ್ಕಾಗಿ ಹೇಳಿದರು.
ಸರ್ಕಾರ, ಕಾನೂನು ಇನ್ನು ಮೇಲೆ ಸುಮ್ಮನೆ ಕೂರುವುದಕ್ಕೆ ಆಗಲ್ಲ ಎಂದು ಕೋಮು ಗಲಭೆಕೋರರಿಗೆ ಸಚಿವರು ಎಚ್ಚರಿಕೆ ನೀಡಿದರು.
ಭಟ್ಕಳದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಚುನಾವಣೆ ಸ್ಪರ್ಧಿಸುವ ಹೇಳಿಕೆಗೆ ಪ್ರತಿಕ್ರೀಯಿಸಿದ ಸಚಿವರು, ಸಾಧು ಸಂತರ ಆರ್ಶೀವಾದ ನಮ್ಮ ಪಕ್ಷದ ಮೇಲೆ ಇರಲಿ, ಎಂದು ಕೇಳಿಕೊಂಡಿದ್ದೆವೆ. ಸ್ವಾಮೀಜಿಗಳು ಇದಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಸಾಧು ಸಂತರ ಆಶೀರ್ವಾದ ಇದೆ. ನಿಮ್ಮ ಆಶೀರ್ವಾದ ಪಕ್ಷದ ಮೇಲೆ ಇದ್ದರೆ ಸಾಕು ಎಂದು ಬೇಡಿಕೊಂಡಿದ್ದೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.