ಕಾರವಾರ : ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯಲಿರುವ ಗಡಿನಾಡ ಕನ್ನಡ ಉತ್ಸವದ ಸೈಕಲ್ ರ್ಯಾಲಿ ಶುಕ್ರವಾರ ನಡೆಯಿತು.
ಕಾರವಾರ-ಗೋವಾ ಗಡಿಭಾಗ ಮಾಜಾಳಿಯಿಂದ ಆರಂಭವಾದ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹಾಗೂ ಎಸ್ಪಿ ಡಾ ಸುಮನ್ ಫೆನ್ನೆಕರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸೈಕಲ್ ಜಾಥಾ ಕಾರವಾರದ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತು. ಕಾರವಾರ ಬೈಸಿಕಲ್ ಕ್ಲಬ್ ಸದಸ್ಯರು ಮತ್ತು ಸುತ್ತಮುತ್ತಲಿನ ನೂರೈವತ್ತಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಗಡಿಭಾಗದಲ್ಲಿರುವ ಗಾಬಿತವಾಡದ ಸರ್ಕಾರಿ ಶಾಲೆಯನ್ನ ದತ್ತು ತೆಗೆದುಕೊಳ್ಳಲಾಯಿತು. ಸರ್ಕಾರಿ ನೌಕರರ ಸಂಘದಿಂದಲೇ ಶಾಲೆಯನ್ನ ಸ್ಮಾರ್ಟ್ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆ ತೆಗೆದುಕೊಳ್ಳಲಾಯಿತು.