ಬೆಂಗಳೂರು, ಮೇ. 3 : ತಮ್ಮ ವಿರುದ್ದ ಕೇಳಿ ಬಂದಿರುವ ಅತ್ಯಾಚಾರ ಪ್ರಕರಣದಲ್ಲಿ ಮಧು ಬಂಗಾರಪ್ಪ ಅವರ ನೇರ ಕೈವಾಡವಿದೆ. ಇದಕ್ಕೆ ಅವರ ತಂದೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಇವರ ಆಶೀರ್ವಾದವಿದೆ ಎಂದು ಮಾಜಿ ಸಚಿವ ಹರತಾಳ್ ಹಾಲಪ್ಪ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.
ಸುವರ್ಣ ಚಾನೆಲ್ ನಲ್ಲಿ ಸಂದರ್ಶನ ನೀಡಿದ ಹಾಲಪ್ಪ, ನನ್ನ ಮೇಲೆ ಬಂದಿರುವ ಆರೋಪವೆಲ್ಲವೂ ವ್ಯವಸ್ಥಿತ ಪಿತೂರಿ. ಇದರ ಹಿಂದೆ ಸಂಚಿದೆ. ನನ್ನ ರಾಜಕೀಯ ಏಳ್ಗೆ ತಾಳಲಾರದೆ ಈ ಕೃತ್ಯವನ್ನು ಹೆಣೆಯಲಾಗಿದೆ ಎಂದರು. ಮುಖ್ಯವಾಗಿ ಸೊರಬ ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪ್ಪ ಅವರ ಮಗ ಮಧು ಅವರನ್ನು ಸೋಲಿಸಿದ್ದೆ. ಅವರ ಆರ್ಶೀವಾದದಿಂದ ಬೆಳೆದ ನಾನು. ಇದೀಗ ನಾನು ಬಿಜೆಪಿಯಲ್ಲಿ ಸಚಿವನಾಗಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಅಲ್ಲದೇ, ಮುಖ್ಯಮಂತ್ರಿ ಗೆ ತುಂಬಾ ಹತ್ತಿರವಾಗಿದ್ದು ಬಂಗಾರಪ್ಪ ಅವರು ನನ್ನ ವಿರುದ್ಧ ಕುದಿಯಲು ಕಾರಣವಾಗಿದೆ.
ನಾನು ಈಗಲೂ ಹೇಳುವೆ, ನನ್ನ ಮೇಲೆ ಬಂದಿರುವ ಆರೋಪ ಸಾಬೀತಾದರ ಜೈಲಿಗೆ ಹೋಗಲೂ ಸಿದ್ದ. ದೇಶದ ಕಾನೂನಿಗೆ ನಾನು ಹೊರತಲ್ಲ. ಇದೀಗ ತಾನೇ ಕಾನೂನು ಸಮರ ಶುರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಹೊರಬರಲಿದೆ ಎಂದು ಹಾಲಪ್ಪ ವಿವರಿಸಿದರು. ವೆಂಕಟೇಶ್ ಮೂರ್ತಿ ಅವರ ಮನೆಗೆ ನಾನು ಹೋಗುತ್ತಿದ್ದೆ. ಆದರೆ, ಹೀಗೆ ಮಾಡಲು ಸಾಧ್ಯವೇ ಇಲ್ಲ. ರಾಜಕೀಯವಾಗಿ ನಾನು ಬೆಳೆಯಲು ಬಂಗಾರಪ್ಪ ಕಾರಣರು. ಆದರೆ, ಇಂದು ಅವರ ಮಾಡಿದ ಈ ಕೃತ್ಯದಿಂದ ನನ್ನ ಮನೆಯಲ್ಲಿದ್ದ ಅವರ ಫೋಟೋವನ್ನು ತೆಗೆದುಹಾಕಿದ್ದೇನೆ ಎಂದು ಹಾಲಪ್ಪ ಹೇಳಿದರು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಸಂಚಿನ ರೂವಾರಿ ಎಂದು ಹಾಲಪ್ಪ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮಧು ತಿರುಗೇಟು
ನಮ್ಮ ಕುಟುಂಬದ ಮೇಲೆ ಹಾಲಪ್ಪ ಮಾಡಿರುವ ಆರೋಪ ಎಲ್ಲವೂ ಸುಳ್ಳು. ಈ ಬಗ್ಗೆ ತನಿಖೆಯಾಗಬೇಕು. ಸರಕಾರ ಈ ಬಗ್ಗೆ ಪಾರದರ್ಶಕವಾಗಿ ತನಿಖೆಯಾಗಲಿ. ಮುಖ್ಯಮಂತ್ರಿಗಳು ಈ ಕೂಡಲೇ ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಮಧು ಬಂಗಾರಪ್ಪ ಒತ್ತಾಯಿಸಿದರು. ನನ್ನ ತಂಟೆಗೆ ಬಂದರೆ ಹಾಲಪ್ಪನನ್ನು ಧೂಳಿಪಟ ಮಾಡುವೆ ಎಂದು ಬಂಗಾರಪ್ಪ ಭಾನುವಾರವೇ ಗುಡುಗಿದ್ದಾರೆ.