ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ

ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ

Wed, 10 Mar 2010 18:37:00  Office Staff   S.O. News Service


ದನಗಳನ್ನು ಆಹಾರವಾಗಿ ಬಳಸುವ ಪ್ರಶ್ನೆಯಲ್ಲಿ ಅಘಾತಕಾರಿಯಾದದ್ದುಅಪವಿತ್ರವಾದದ್ದು ಏನೂ ಇಲ್ಲಪ್ರಾಚೀನ ಕಾಲದಲ್ಲಿ ಆರ್ಯರಲ್ಲಿ ದನದ ಮಾಂಸದ ಬಳಕೆ ವ್ಯಾಪಕವಾಗಿತ್ತುಇಂದಿಗೂ ದೊಡ್ಡ ಸಂಖ್ಯೆಯ ಜನ ಇದನ್ನು ಆಹಾರವಾಗಿ ಬಳಸುತ್ತಾರೆ.ಆದರೆ ಕೋಮುವಾದಿ ರಾಜಕೀಯ ಮಹತ್ವಾಕಾಂಕ್ಷೆಗಳು ದನದ ಮಾಂಸದ ಪ್ರಶ್ನೆಯನ್ನು ವಿವಾದದ ಪ್ರಶ್ನೆಯಾಗಿಸಿವೆಪ್ರಸ್ತುತ ವಿದಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ತಾಂತ್ರಿಕ ಕಾರಣಗಳ ಮೇಲೆ ಹಿಂದೆ ಪಡೆದಿದ್ದರೂ ಅದು ಜನವಿರೋಧಿ ಸ್ವರೂಪದಲ್ಲಿ ಮತ್ತೆ ಬರುವ ಸಂದರ್ಭ ಹತ್ತಿರದಲ್ಲೇ ಇದೆ.

 

`ಗೋಹತ್ಯೆ ನಿಷೇದ‘ ಕಾಯ್ದೆಯನ್ನು ಜಾರಿಗೆ ತಂದು ಸಂಘ ಪರಿವಾರದ ಪಡೆಗಳು ಇನ್ನಷ್ಟು ಮುಸ್ಲಿಂ ಮತ್ತು ದಲಿತರ ಮೇಲೆ ಎರಗಲು ಅನುವು ಮಾಡಿಕೊಡಲು ಕಳೆದ ಅಧಿವೇಶನದಲ್ಲೇ ಸಂಚು ರೂಪಿಸಲಾಗಿತ್ತುಆದರೆ ಜನರ ವಿರೋಧ ರಾಜಕೀಯವಾಗಿ ಬಯಲಾಗತೊಡಗಿದ ಪರಿಣಾಮ ಆ ಅಧಿವೇಶನದಲ್ಲಿ ಗೋಹತ್ಯೆ ನಿಷೇದದ ಕಾಯಿದೆಯನ್ನು ಜಾರಿಗೆ ತರುವ ಧೈರ್ಯ ಮಾಡಲಿಲ್ಲಬದಲಿಗೆ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ವೈದಿಕವಾದಿ ಗೃಹಸಚಿವ ಆಚಾರ್ಯ ನೇತೃತ್ವದಲ್ಲಿ ಸಂಪುಟ ಉಪಸಮಿತಿಯ ಸುಪರ್ದಿಗೆ ವಹಿಸಲಾಗಿತ್ತುಇಷ್ಟಾದರೂ ಬಿಜೆಪಿ ಮತ್ತು ಸಂಘ ಪರಿವಾರದ ತನ್ನ ಬಾಲಂಗೋಚಿ ಮಠಾಧಿಪತಿಗಳುಸಂಘ ಪರಿವಾರದ ಎಲ್ಲಾ ಸಂಘ ಸಂಸ್ಥೆಗಳು `ಹಸುವನ್ನು ಸ್ಮರಿಸೋಣ ಪುಣ್ಯವನ್ನು ಗಳಿಸೋಣ‘,ಎಂಬಿತ್ಯಾದಿ ಘೋಷಣೆಗಳಡಿ ಗೋ ಗ್ರಾಮ ಯಾತ್ರೆಗಳು ರಾಜ್ಯಾದ್ಯಂತ ಸಂಚರಿಸುತ್ತಿವೆಇದಕ್ಕೆಲ್ಲಾ ಮೇವುನೀರು ಹಾಕಿ ಗೋ ಗ್ರಾಮ ಯಾತ್ರೆಗಳನ್ನು ಸಾಗಿಸುತ್ತಿರುವುದು ಬಿಜೆಪಿಯೇ ಎಂಬುದನ್ನು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. 

 

 

 

 

ಅನಾಗರಿಕರಿಗೆ ಹಸುಗಳ ಮೇಲೆ ಪ್ರೀತಿ ಹುಟ್ಟಿದ್ದು ಯಾವಾಗ
 ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂದುತ್ವವಾದಿಗಳು ಉಗ್ರಗಾಮಿಗಳಾಗಿ ಅಲ್ಪಸಂಖ್ಯಾತದಲಿತರ ಮೇಲೆ ಎರಗಿ ಗೋರಕ್ಷಣೆ ಕಾಯ್ದೆಯನ್ನು ಜಾರಿಗೆ ತರಲು ಒತ್ತಾಯಿಸುವುದು ಇದೇ ಮೊದಲಲ್ಲಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರದಲ್ಲಿದ್ದಾಗ (2002ರಲ್ಲಿಗೋಹತ್ಯೆ ನಿಷೇದ ಕಾಯಿದೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದು ಕೂಡಾ ಮೊದಲಲ್ಲಬಹಳ ವರ್ಷಗಳ ಹಿಂದೆಯೇ ಅಂದರೆ 1870 ರಲ್ಲಿ ಮುಸ್ಲಿಂ ಜನತೆಯ ವಿರುದ್ಧ ಸಾಮೂಹಿಕವಾಗಿ ಹಿಂದುಗಳನ್ನೆಲ್ಲಾ ಎತ್ತಿಕಟ್ಟಲು ಮೊದಲಿಗೆ ಪಂಜಾಬ್ನಲ್ಲಿ ಪ್ರಯತ್ನಗಳನ್ನು ಪ್ರಾರಂಭಿಸಿದ್ದರುನಂತರದಲ್ಲಿ ದಯಾನಂದ ಸರಸ್ವತಿಯವರು 1882 ರಲ್ಲಿ ಗೋರಕ್ಷಣೆ ಸಭಾ” ನಡೆಸುವ ಮೂಲಕ ರಾಜಕೀಯವಾಗಿ ಹಿಂದೂಗಳನ್ನು ಮತೋನ್ಮಾದಗೊಳಿಸಲು ಹಸುವನ್ನು `ಆಯುಧವನ್ನಾಗಿ ಮಾಡಿಕೊಳ್ಳಲಾಯಿತು. 1880 ಮತ್ತು 1890 ರಲ್ಲೇ ಗೋರಕ್ಷಣೆ ಹೆಸರಿನಲ್ಲಿ ಹಿಂದೂಮುಸ್ಲಿಂ ನಡುವೆ ಕೋಮುಗಲಭೆಗಳನ್ನು ಸೃಷ್ಠಿಸಲಾಗಿತ್ತುಈ ಸಂದರ್ಭದಲ್ಲಿ ನೂರಾರು ಹಿಂದೂಮುಸ್ಲಿಂ ಜನತೆ ಗಲಭೆಯಲ್ಲಿ ಸತ್ತರುತೀವ್ರತರ ಗಾಯಗೊಂಡರು.ಇದೇ ಸಂದರ್ಭದಲ್ಲಿ ದೇಶಾದ್ಯಂತ ಕೋಮುಗಲಭೆಗಳು ಹರಡತೊಡಗಿದವುಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಕೋಮುವಾದಿಗಳು ಭಾವನಾತ್ಮಕವಾಗಿ ಜನತೆಯನ್ನು ಹುಚ್ಚೆಬ್ಬಿಸುತ್ತಲೇ ಬಂದವುಇಷ್ಟಾದರೂ ಸಂವಿಧಾನದ ಆಶಯದಂತೆ ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 12 ವರ್ಷ ಮೀರಿದ ಹಸುಗಳುಎತ್ತುಗಳುಎಮ್ಮೆ ಹಾಗೂ ಇನ್ನಿತರ ಸಾಕು ಪ್ರಾಣಿಗಳನ್ನು ಆಹಾರಕ್ಕಾಗಿ ಬಳಸಲು ಸುಪ್ರಿಂ ಕೋರ್ಟ್ 1966 ರಲ್ಲೇ ಅವಕಾಶ ನೀಡಿತ್ತು.ಇದನ್ನು ಸಹಿಸದ ಮತಾಂಧರು ರಾಜಕೀಯ ಲಾಭಕ್ಕಾಗಿ ಕೋಮುವಾದಿ ರಾಜಕೀಯ ಪಕ್ಷಗಳು

 

 

ಸಂಘ ಪರಿವಾರದ ಪೂರ್ವಿಕರೇ ಮೊದಲಿಗೆ ಗೋ ಭಕ್ಷಕರು 

 

ಭಾರತ ದೇಶದ ಐತಿಹಾಸ ಬಲ್ಲ ಎಲ್ಲರಿಗೂ ಆರ್ಯರ ಮೂಲ ಯಾವುದುಅವರ ಕುಲ ಕಸುಬುಬೇನೆಂಬುದರ ಬಗ್ಗೆ ವೈಜ್ಞಾನಿಕ ಸಂಶೋಧನೆಗಳ ಮೂಲಕ ಹಾಗೂ ಐತಿಹಾಸಿಕ ದಾಖಲೆಗಳ ಮೂಲಕವೂ ದೃಢಪಟ್ಟಿದೆಋಗ್ವೇದದಲ್ಲಿ ಮಹಾಭಾರತದ,ರಾಮಾಯಣದ ಗ್ರಂಥಗಳಲ್ಲೂ ಗೋಮಾಂಸ ಭಕ್ಷಣೆಯ ಉಲ್ಲೇಖಗಳು ವಿಜೃಂಭಿಸುತ್ತವೆಋಗ್ವೇದದಲ್ಲಿ ಅನೇಕ ಬಾರಿ ಪ್ರಚುರಪಡಿಸುವುದೇನೆಂದರೆ ಹಿಂದೂ ದೇವರಾದ ಇಂದ್ರನಿಗೆ ಎತ್ತಿನ ಮಾಂಸವೇ ಇಷ್ಟವಾಗಿತ್ತಂತೆಯಾಕೆಂದರೆ ಶತ್ರುಗಳ ಸಂಹಾರಕ್ಕಾಗಿ ತನ್ನ ದೇಹಧಾಡ್ಯತೆ ಮತ್ತು ಬಾಹುಗಳನ್ನು ಗಟ್ಟಿಗೊಳಿಸಲು ಎಂದು ಅನೇಕ ಬಾರಿ `15ಕ್ಕಿಂತ ಹೆಚ್ಚಿನ ಎತ್ತುಗಳು ಹಾಗೂ 30 ರಿಂದ 1000 ಕೋಣಗಳನ್ನು ಅಗ್ನಿಯಿಂದ ಸುಟ್ಟಿದ್ದ ಮಾಂಸಹಾರವನ್ನು ನನಗಾಗಿ ತಯಾರು ಮಾಡಲಾಗಿತ್ತೆಂದುಇಂದ್ರನೇ ಹೇಳಿದ್ದಾನೆಇಂತಹ ಉದಾಹರಣೆಗಳನ್ನು ನಾವು ಡಾಡಿ.ಎನ್.ಜಾ ರವರು ಸಂಶೋಧನೆ ನಡೆಸಿ ಸಂಪಾದಿಸಿರುವ`ದಿ ಮಿಥ್ ಅಫ್ ದಿ ಹೋಲಿ ಕೌ‘ ಎಂಬ ಪುಸ್ತಕ ಹಾಗೂ ಡಾಬಿ.ಆರ್.ಅಂಬೇಡ್ಕರ್ರವರ ಬರಹಗಳು ಮತ್ತು ಭಾಷಣಗಳ ಸಂಪುಟರಲ್ಲಿ ಮತ್ತು ಸಂಪುಟ ರಲ್ಲಿ ನೋಡಬಹುದು.

ನಾಲಿಗೆಗೆ ಮೆತ್ತಗಿರಲು ಹಾಗೂ ಕೊಬ್ಬಿರುವಹುಟ್ಟಿ ಎರಡು ಮೂರು ದಿನಗಳನ್ನು ಮಾತ್ರ ಕಳೆದಿರುವ ಎಳೆಯ ಕರುಗಳನ್ನು ತಿಂದು ತೇಗುತ್ತಿದ್ದ ಬ್ರಾಹ್ಮಣರು ಸಸ್ಯಹಾರಿಗಳಾಗಲು ಕಾರಣವೇನುಡಾ.ಬಿ.ಆರ್.ಅಂಬೇಡ್ಕರ್ರವರು ಹೇಳಿದಂತೆ ಬ್ರಾಹ್ಮಣರು ಹಸುಗಳನ್ನು ದಾನ ಪಡೆದು ಪಶು ಸಂಗೋಪನೆ ಮಾಡುತ್ತಿರಲಿಲ್ಲವ್ಯವಸಾಯವನ್ನು ಮೊದಲಿನಿಂದಲೇ ಮಾಡುತ್ತಿರಲಿಲ್ಲ.ಬದಲಿಗೆ ಕಟುಕರಾಗಿದ್ದಲ್ಲದೇ ಗೋಮಾಂಸ ಭಕ್ಷಕರಾಗಿದ್ದರೆಂದು ಹೇಳಿದ್ದಾರೆ.

 

ಬ್ರಾಹ್ಮಣ ಅತಿಥಿ ಮನೆಗೆ ಬಂದರೆ ಅವನನ್ನು ಗೋಘ್ನ (`Go Ghna‘) ಎಂದು ಕರೆಯತ್ತಿದ್ದರುಯಾಕೆಂದರೆ ಆ ಅತಿಥಿಯನ್ನು ಸತ್ಕರಿಸಲು ಒಂದು ಹಸುವನ್ನು ಹತ್ಯೆ ಮಾಡಿ ಮಾಂಸದೂಟವನ್ನು ತಯಾರಿ ಮಾಡಿಕೊಡಬೇಕಿತ್ತುಆದ್ದರಿಂದ ಅತಿಥಿಯಾಗಿ ಬಂದ ಬ್ರಾಹ್ಮಣನನ್ನು `ಗೋಘ್ನ‘ ಎಂದು ಕರೆಯುತ್ತಿದ್ದರುಹೀಗೆ ಋಗ್ವೇದದಲ್ಲಿವಿವಿಧ ರೀತಿಯಲ್ಲಿ ಹಸು ಎತ್ತುಎಮ್ಮೆಗಳನ್ನು ಯಜ್ಞಗಳ ಹೆಸರಿನಲ್ಲಿ ಬಲಿಕೊಟ್ಟು ಬ್ರಾಹ್ಮಣರೆಲ್ಲರೂ ಭಕ್ಷಿಸುತ್ತಿದ್ದರುಅಶ್ವಮೇಧರಾಜಸೂಯ ಮತ್ತು ವಾಜಪೇಯ ಇಂತಹ ಯಜ್ಞಗಳಲ್ಲಿ ಮುಖ್ಯವಾಗಿ ಸಾವಿರಾರು ಪ್ರಾಣಿಗಳನ್ನು ಬಲಿಕೊಟ್ಟು ಸಾಮೂಹಿಕವಾಗಿ ಭಕ್ಷಿಸುತ್ತಿದ್ದರುಇಂತಹ ಯಜ್ಞಗಳ ಮೂಲಕಧಾನ-ಧರ್ಮಗಳ ಮೂಲಕ ಸಂಘ ಪರಿವಾರದ ಪೂವರ್ಿಕರು ದನದ ಮಾಂಸವನ್ನು ಭಕ್ಷಿಸುತ್ತಿದ್ದರೆಂಬುದಕ್ಕೆ ಪುರಾತತ್ವ ಆಧಾರಗಳು (archacological evidenceಸಾಕ್ಷೀಕರಿಸಿವೆಮೀರತ್ನ ಹಸ್ತೀನಾಪುರದಲ್ಲಿ ಎತ್ತುಹಸು,ಎಮ್ಮೆಗಳ ಕತ್ತರಿಸಲ್ಪಟ್ಟಂತಹ ಮೂಳೆಗಳ ರಾಶಿ ರಾಶಿ ಪಳೆಯುಳಿಕೆಗಳೇ ಗೊತ್ತುಪಡಿಸುತ್ತಿವೆಇದೇ ರೀತಿ ಪಂಜಾಬ್ಉತ್ತರ ಪ್ರದೇಶಹರಿಯಾಣರಾಜಸ್ಥಾನ ಮುಂತಾದೆಡೆ ಮೂಳೆಗಳ ರಾಶಿ ಕಾಣಬಹುದೆಂದು ಇತಿಹಾಸತಜ್ಞರು ದೃಢಪಡಿಸಿದ್ದಾರೆ.

 

ಪುರಾತನ ಕಾಲದಲ್ಲಿ ಎಲ್ಲಾ ಪ್ರಾಣಿಗಳನ್ನು ಭಕ್ಷಿಸುತ್ತಿದ್ದವರು ಸಸ್ಯಹಾರಿಗಳಾಗಲು ಕಾರಣವೇನು ಎಂಬುದು ಜನಸಾಮಾನ್ಯರಲ್ಲಿ ಹುಟ್ಟುವ ಪ್ರಶ್ನೆಇತಿಹಾಸ ತಜ್ಞರೇ ದೃಢಪಡಿಸಿರುವ ಹಾಗೆ ಶುದ್ಧ ಸೋಮಾರಿಗಳಾಗಿ ಯಜ್ಞಯಾಗಾದಿಗಳ ಹೆಸರಿನಲ್ಲಿ ಹಿಂಸೆಗಳಿಗೆ ನಾಂದಿ ಹಾಡುತ್ತಿದ್ದ ಸನಾತನ ಬ್ರಾಹ್ಮಣ್ಯದ ಅಧರ್ಮವನ್ನು ಧಿಕ್ಕರಿಸಿ ಬೌದ್ಧ ಧರ್ಮಕ್ಕೆ ಜನರು ಆಕರ್ಷಿತರಾಗತೊಡಗಿದ್ದರುಇಂಥ ಸಂದರ್ಭದಲ್ಲಿ ಬ್ರಾಹ್ಮಣ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಗೋಮಾಂಸ ಭಕ್ಷಕರು ಗೋರಕ್ಷಕರಾಗಿ ಪರಿವರ್ತನೆಗೊಂಡರುಬೌದ್ಧ ಧರ್ಮದ ಭಿಕ್ಕುಗಳು ಹಾಗೂ ಬ್ರಾಹ್ಮಣ್ಯದ ವಿರುದ್ಧ ಸಂಘರ್ಷವೇ ನಡೆದು ಲಕ್ಷಾಂತರ ಬೌದ್ಧ ಭಿಕ್ಕುಗಳನ್ನು ಕೊಲ್ಲಲಾಯಿತುಇಂಥವುಗಳಿಗೆ ನಾಯಕತ್ವ ನೀಡಿದವರು ಶಂಕರಾಚಾರ್ಯರು.ಅಮಾನವೀಯ ಪದ್ಧತಿಮೌಢ್ಯತೆಯನ್ನು ಎತ್ತಿಹಿಡಿದಿದ್ದುದರ ಪರಿಣಾಮವೇ ದೇಶದಲ್ಲಿ ಜಾತಿ ಅಸ್ಪೃಶ್ಯತೆಯ ಆಚರಣೆ ಅನಾಗರೀಕತೆ ಭಾರತದಲ್ಲಿ ಮುಂದುವರೆದಿದೆಆಧುನಿಕ ಯುಗದಲ್ಲೂ ನೇಗಿಲ ಗುಳದಿಂದ ದಲಿತ ಸೋದರಿಯರ ಯೋನಿಗೆ ಚುಚ್ಚಿ ಸಾಯಿಸುತ್ತಾರೆ. (ಮಹಾರಾಷ್ಟ್ರದ ಖ್ಯೆರ್ಲಾಂಜಿ ಘಟನೆಜೀವಂತ ಸುಡುತಾರೆಮಲ ತಿನ್ನಿಸುತ್ತಾರೆಮೂತ್ರ ಕುಡಿಸುತ್ತಾರೆದೇಶದ ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆ ಜನತೆ ಮೇಲ್ಜಾತಿ ಜನರಎದುರು ನಡುಬಗ್ಗಿಸಿಯೇ ನಡೆಯುವಂತೆಯೇ ನಿರ್ಭಂಧಿಸಲಾಗಿದೆಇಂತಹ ಕ್ರೌರ್ಯಗಳ ಬಗ್ಗೆ ಕರುಣೆ ಇಲ್ಲದೆ ಬಡದಲಿತಅಲ್ಪಸಂಖ್ಯಾತರು ಹಿಂದುಳದ ವರ್ಗಗಳು ಬಳಸುವ ದನದ ಮಾಂಸದ ಆಹಾರದ ಹಕ್ಕನ್ನು ಕಸಿಯಲು ಹೊರಟಿದ್ದಾರೆರಾಜಕೀಯ ಲಾಭಕ್ಕಾಗಿ ಮುಸ್ಲಿಂರ ವಿರುದ್ಧಮುಸ್ಲಿಂರ ಆಗಮದಿಂದಲೇ ಭಾರತದಲ್ಲಿ ಗೋಹತ್ಯೆ ಆರಂಭವಾಯಿತೆಂದು ಇತಿಹಾಸವನ್ನು ತಿರುಚಿ ರಾಷ್ಟ್ರೀಯ ಪ್ರಾಣಿ ಹಸು ಎಂದು ಘೋಷಿಸಲು ಒತ್ತಡ ಹೇರುತ್ತಿದ್ದಾರೆದುಡಿಯುವ ರೈತಾಪಿ ವರ್ಗ ಹಸುಗಳ ಆರೈಕೆಯೊಂದಿಗೆ ಜೀವನ ನಡೆಸಿ ಉಪಯೋಗವಿಲ್ಲದ ಸಂದರ್ಭದಲ್ಲಿ ಕಸಾಯಿ ಖಾನೆಗೆ ಮಾರುವುದುಂಟುನಂತರದಲ್ಲಿ ಈ ದನಗಳ ಮಾಂಸ ಬಡವರಿಗೆ ಆಹಾರವಾಗಿ ಮತ್ತು ಚರ್ಮೋದ್ಯೋಗ ಲಕ್ಷಾಂತರ ಜನರ ಉದ್ಯೋಗದ ಆಸರೆಯೂ ಆಗಿದೆ.
ಹೀಗಿರುವಾಗ ಸುಖದ ಸುಪ್ಪತ್ತಿಗೆಯಲ್ಲಿರುವವರುಹಸುವಿನ ಹತ್ತಿರ ಸುಳಿಯದವರುತಮ್ಮ ಡೈನಿಂಗ್ ಟೇಬಲ್ ಮೇಲೆ ಪ್ರತಿನಿತ್ಯ ಕೆ.ಜಿ.ಗಟ್ಟಲೆ ಸೇಬು ಹಣ್ಣುಗಳನ್ನು ಇಟ್ಟುಕೊಂಡು ತಿನ್ನುವಂತೆ ಪ್ರತಿನಿತ್ಯ ದನದ ಮಾಂಸವನ್ನು ಬಡಜನತೆ ತಿನ್ನುವುದಿಲ್ಲ.ಹದಿನೈದು ದಿವಸಕ್ಕೊ

Share: