ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಡುಬಿದ್ರಿ: ಕಿಟಕಿ ಸರಳು ಮುರಿದು ಮನೆಗೆ ನುಗ್ಗಿದ ಕಳ್ಳರು - ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪಡುಬಿದ್ರಿ: ಕಿಟಕಿ ಸರಳು ಮುರಿದು ಮನೆಗೆ ನುಗ್ಗಿದ ಕಳ್ಳರು - ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Wed, 30 Dec 2009 18:24:00  Office Staff   S.O. News Service
ಪಡುಬಿದ್ರಿ, ಡಿಸೆಂಬರ್ 30:  ಇಲ್ಲಿನ ನಂದಿಕೂರಿನ ಕಾರ್ಪೊರೇಶನ್ ಬ್ಯಾಂಕ್ ಬಳಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಡೆದಿದೆ.
30%20pdb3.jpg
ಮನೆಯ ಕಿಟಕಿಯ ಸರಳುಗಳನ್ನು ಮನೆಯ ಹೊರಗೆ ಇದ್ದ ರುಬ್ಬುವ ಕಲ್ಲಿನಿಂದ ಹೊಡೆದು ಮುರಿದ ಕಳ್ಳರು ಒಳಗೆ ನುಗ್ಗಿ ಮನೆಯ ಎಲ್ಲಾ ಕೋಣೆಯ ಕಪಾಟುಗಳನ್ನು ಜಾಲಾಡಿದ್ದಾರೆ. ಮನೆಯ ಇನ್ನೊಂದು ಕೋಣೆಯ ಕಪಾಟಿನಲ್ಲಿ ಇದ್ದ ನಾಲ್ಕು ಪವನ್‌ನ ನಾಲ್ಕು ಬಲೆಗಳು, ಅರ್ಧ ಪವನ್‌ನ ರಿಂಗ್, ಒಂದೂವರೆ ಪವನ್‌ನ ನಕ್ಲೇಸ್, ಬೆಳೆಬಾಳುವ ನಾಲ್ಕು ವಾಚ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕದ್ದ ವಸ್ತುಗಳು ಒಂದು ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ತಿಳಿದುಬಂದಿದೆ.

ನಂದಿಕೂರಿನ ಹರೀಶ್ ಕುಮಾರ್ ಜೋಯಿಸ ಎಂಬವರಿಗೆ ಸೇರಿದ ಮನೆಯಲ್ಲಿ ಬೆಳಿಗ್ಗೆ ಸುಮಾರು ೯.೩೦ರಿಂದ ೧೧ ಗಂಟೆಯ ಮಧ್ಯೆ ಈ ಘಟನೆ ನಡೆದಿದೆ. ಹರೀಶ್ ಕುಮಾರ್ ಜೋಯಿಸ ಮುದರಂಗಡಿಯ ಪೋಸ್ಟ್ ಮಾಸ್ಟರ್ ಆಗಿದ್ದು ಅವರ ಪತ್ನಿಯೂ ನಂದಿಕೂರು ಪೋಸ್ಟ್ ಆಫೀಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮಕ್ಕಳು ಶಾಲೆಗೆಂದು ಹೋಗಿದ್ದರು. ಆದರೆ ರಜೆ ಇದ್ದ ಕಾರಣ ಶಾಲೆಯಿಂದ ವಾಪಾಸು ಬಂದು ನೋಡಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂತು.

Share: