ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ರಸ್ತೆ ಬದಿ ನಡೆದು ಬರುತ್ತಿದ್ದ ಮಹಿಳೆಯನ್ನು ಗಾಯಗೊಳಿಸಿ ಪರಾರಿಯಾದ ವಾಹನ

ಭಟ್ಕಳ: ರಸ್ತೆ ಬದಿ ನಡೆದು ಬರುತ್ತಿದ್ದ ಮಹಿಳೆಯನ್ನು ಗಾಯಗೊಳಿಸಿ ಪರಾರಿಯಾದ ವಾಹನ

Tue, 02 Mar 2010 15:47:00  Office Staff   S.O. News Service

ಭಟ್ಕಳ: ಮಾರ್ಚ್ 1: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿ ಪರಾರಿಯಾದ ಘಟನೆ ನಡೆದಿದೆ.

ಗಾಯಗೊಂಡವಳನ್ನು ಮಹಿಳೆಯನ್ನು ವೆಂಕಟಾಪುರದ ಲಕ್ಷ್ಮೀ (61) ಎಂದು ಹೇಳಲಾಗಿದೆ. ಈಕೆ ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದು, ನಿನ್ನೆ ಶಿರಾಲಿ ಚೆಕ್ ಪೋಷ್ಟ ಸನಿಹದ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

 

ಡಿಕ್ಕಿಯಿಂದ ಮಹಿಳೆಯ ತಲೆ ಸೇರಿದಂತೆ ವಿವಿಧ ಕಡೆ ಗಂಭೀರಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


Share: