ಬಂಟ್ವಾಳ, ಏಪ್ರಿಲ್ 18: ಬಸವಣ್ಣನವರ ಆದರ್ಶದ ಹಾದಿಯನ್ನು ನಾವು ನಿತ್ಯಜೀವನದಲ್ಲಿ ಪಾಲಿಸುವುದರೊಂದಿಗೆ ನಮ್ಮ ಬದುಕನ್ನು ಸಾರ್ಥಕ ಗೊಳಿಸಬೇಕು ಎಂದು ಮೈಸೂರು ಮುರುಘ ರಾಜೇಂದ್ರ ಬೃಹನ್ಮಠದ ಶ್ರೀ ಬಸವ ಲಿಂಗ ಮೂರ್ತಿ ಸ್ವಾಮೀಜಿ ಕರೆ ನೀಡಿದ್ದಾರೆ.
ನವಚೇತನಾ ಸೇವಾಟ್ರಸ್ಟ್(ರಿ.) ಬಂಟ್ವಾಳ, ಕರ್ನಾಟಕ ರಾಜ್ಯ ದಲಿತ್ ಮಹಾಸಭಾದ ದ.ಕ.ಜಿಲ್ಲಾ ಶಾಖೆಯ ಸಹಯೋಗದಲ್ಲಿ ಬಾಬಾ ಸಾಹೇಭ್ ಅಂಬೇಡ್ಕರ್ ಜನ್ಮದಿನಾಚರಣೆ ಯ ಅಂಗವಾಗಿ ಬಿ.ಸಿರೋಡಿನಲ್ಲಿ ಭಾನುವಾರ ನಡೆದ ಸಾರ್ವಜನಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾ ೧೪ ನವದಂಪತಿಗಳಿಗೆ ಅವರು ಆಶೀರ್ವಚನ ನೀಡಿ ಮಾತನಾಡಿದರು. ಕರ್ನಾಟಕದಲ್ಲಿ ಹುಟ್ಟಿದ ಹಲವರು ತಮ್ಮದೇ ಆದ ಒಳ್ಳೆಯ ಕಾರ್ಯಗಳಿಂದ ಜನಾನುರಾಗಿಗಳಾಗಿದ್ದಾರೆ. ಉತ್ತಮ ಕಾರ್ಯ ಮಾಡುವವರನ್ನು ಸಮಾಜ ಗೌರವದಿಂದ ಕಾಣುತ್ತದೆ ಎಂದ ಅವರು, ಪರೋಪಕಾರ, ಪ್ರೀತಿ,ವಿಶ್ವಾಸದ ಬದುಕಿನೊಂದಿಗೆ ಜೀವನದಲ್ಲಿ ಯಶಸ್ಸು ಕಾಣಿ ಎಂದು ಅವರು ಶುಭ ಹಾರೈಸಿದರು.
ಕನ್ಯಾನ ಬಾಳೆಕೋಡಿ ಶ್ರೀ ಕಾಳ ಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭವನ್ನು ಪಲ್ಲಮಜಲು ಶ್ರೀ ರಾಮಭಕ್ತಾಂಜನೇಯ ಭಜನಾಮಂದಿರದ ಅಧ್ಯಕ್ಷ ಸೇಸಪ್ಪ ದಾಸಯ್ಯ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಯುವ ಕಾಂಗ್ರೇಸ್ ಮಾಜಿ ಅಧ್ಯಕ್ಷ ಬೊಮಡಾಲ ಜಗನ್ನಾಥ ಶೆಟ್ಟಿ, ಬಂಟ್ವಾಳ ಪುಸಭಾ ಅಧ್ಯಕ್ಷೆ ಬಿ.ಯಶೋಧ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎ.ರಾಮಚಂದ್ರ, ತಾಲೂಕು ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ, ಮುಖಂಡರಾದ ಪದ್ಮನಾಭ ನರಿಂಗಾನ.ಸೇಸಪ್ಪ ಬೆದ್ರಕಾಡು,ತಾ.ಪಂ. ಸದಸ್ಯರಾದ ವಿನೋದ ವಿಶ್ವನಾಥ ಪೂಜಾರಿ, ಕಾಂಚಲಾಕ್ಷಿ, ವಿಶ್ವನಾಥ ಪಾಕಾಜೆ, ಎಂ.ಎ.ನಾಯ್ಕ, ಹರೀಶ್ ಕುಮಾರ್ ಕೆ, ಮಾಧವ ಕಡೇಶಿವಾಲಯ, ಗಣೇಶ್ ಪಾಕಾಜೆ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಅತಿಥಿಗಳು ಸನ್ಮಾನಿಸಿದರು. ಟ್ರಸ್ಟ್ ಅಧ್ಯಕ್ಷ ರಾಜಾ ಪಲ್ಲಮಜಲು ಸ್ವಾಗತಿಸಿ, ಭಾನುಚಂದ್ರ ಕೃಷ್ಣಾಪುರ ವಂದಿಸಿದರು. ಹೊನ್ನಪ್ಪ ಕುಂದರ್ ಮತ್ತು ಜಯಾನಂದ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶೇಖರ್ ಮಂಗಳೂರು-ವಾರಿಜ ಬಂಟ್ವಾಳ, ನಾರಾಯಣ ಸರಪಾಡಿ-ಪ್ರೇಮ ಸರಪಾಡಿ, ಶಿವಾನಂದ ಮಚ್ಚಿನ-ಶಾರದಾ ಬೆಳ್ತಂಗಡಿ, ಶಿವರಾಮ ಬೆಳ್ತಂಗಡಿ- ಸುಮಿತ್ರಾ ವೇಣೂರು, ರಾಜಣ್ಣ ಸರಪಾಡಿ- ಗುಲಾಬಿ ಸರಪಾಡಿ, ವಸಂತ ಕಾರ್ಕಳ-ಸುನಂದ ಸುರತ್ಕಲ್, ಉಮೇಶ್ ಸುರತ್ಕಲ್-ನಳಿನಿ ಮಂಗಳೂರು, ಎನ್. ಸುರೇಶ ಬಂಟ್ವಾಳ-ಸುನೀತಾ ಬಂಟ್ವಾಳ, ಸುರೇಶ ಪುದು-ಯಶೋಧ ನಾವೂರ ಬೆಳ್ತಂಗಡಿ, ರಾಜೇಂದ್ರ ಪ್ರಸಾದ್ ವಿಟ್ಲ-ವೀಣಾ ಪಿ.ವಿಟ್ಲ, ಸಂಜೀವ ವೀರಕಂಭ-ಲಲಿತ ವೀರಕಂಭ, ಧನಂಜಯ ಬೆಳ್ತಂಗಡಿ-ರೂಪ ಬೆಳ್ತಂಗಡಿ, ಸೀತಾರಾಮ ಕೊಡಂಬೆಟ್ಟು-ಜಯಂತಿ ವೀರಕಂಭ, ನಾಗೇಶ್ ಬಾಳ್ತಿಲ-ಚಂದ್ರಾವತಿ ಕೊಡಂಬೆಟ್ಟು ರವರು ಸತಿಪತಿಗಳಾದರು.