ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸುಳ್ಯ:ಕರಾವಳಿಯ ಸಂಘರ್ಷಗಳಿಗೆ ಮಾತುಕತೆಯೇ ಪರಿಹಾರ

ಸುಳ್ಯ:ಕರಾವಳಿಯ ಸಂಘರ್ಷಗಳಿಗೆ ಮಾತುಕತೆಯೇ ಪರಿಹಾರ

Tue, 17 Nov 2009 03:06:00  Office Staff   S.O. News Service
ಸುಳ್ಯ, ನ.16: ಕರಾವಳಿಯಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ನಡುವೆ ನಡೆಯುವ ಸಮಸ್ಯೆ, ಸಂಘರ್ಷಗಳಿಗೆ ಸೌಹಾರ್ದ ಮಾತುಕತೆ ಯೊಂದೇ ಪರಿಹಾರ. ಅಲ್ಪಸಂಖ್ಯಾತ ಆಯೋಗ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ ಎಂದು ಆಯೋಗದ ಅಧ್ಯಕ್ಷ ಖುಸ್ರೋ ಖುರೇಷಿ ಹೇಳಿದ್ದಾರೆ. 

ಸರ್ವಶಿಕ್ಷಣ ಅಭಿಯಾನ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸುಳ್ಯ ತಾಲೂಕು ಜಮೀಯತುಲ್ ಫಲಾಹ್ ಆಶ್ರಯ ದಲ್ಲಿ ಗ್ರೀನ್ ವ್ಯೂ ಶಾಲೆಯಲ್ಲಿ ನಡೆದ ಅಲ್ಪಸಂಖ್ಯಾತ ಮಕ್ಕಳ ತಾಯಂದಿರ ಜಾಗೃತಿ ಶಿಬಿರ ಸಮಾರೋಪದಲ್ಲಿ ಅವರು ಮಾತನಾಡಿದರು. 

ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಯಲ್ಲ. ಇಸ್ಲಾಂ ವಿರೋಧಿಯೂ ಅಲ್ಲ.  ಹಿಂದಿನ ಸರಕಾರಗಳು ಅಲ್ಪಸಂಖ್ಯಾತರಿ ಗಾಗಿ ಬಜೆಟ್‌ನಲ್ಲಿ ೨೩ಕೋ. ರೂ. ಇರಿಸಿದ್ದರೆ. ಯಡಿಯೂರಪ್ಪ ಸರಕಾರ ೧೭೬ಕೋ.ರೂ. ಮೀಸಲಿಟ್ಟಿದೆ ಎಂದು ಖುರೇಷಿ ಹೇಳಿದರು. 

ಸುಳ್ಯ ನ.ಪಂ.ಅಧ್ಯಕ್ಷ ಎನ್.ಎ. ರಾಮಚಂದ್ರ ಮುಖ್ಯ ಅತಿಥಿಯಾಗಿದ್ದರು. 

ಟಿ.ಎಂ.ಶಹೀದ್, ಪಿ.ಎ. ಮುಹಮ್ಮದ್, ರಹೀಂ ಉಚಿಲ್, ಹಾಜಿ ಇಸ್ಹಾಕ್ ಸಾಹೇಬ್, ಅಬ್ಬಾಸ್ ಹಾಜಿ ಕಟ್ಟೆಕಾರ‍್ಸ್, ಆರೀಫ್ ಮೊಗರ್ಪಣೆ ಮತ್ತಿತರರು ವೇದಿಕೆಯ ಲ್ಲಿದ್ದರು.
  
 ಜಮೀಯತುಲ್ ಫಲಾಹ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿದರು. 

ಮಾಜಿ ಅಧ್ಯಕ್ಷ ಬೀರಾನ್ ಮೊದಿನ್ ಖುರೇಷಿಯವರನ್ನು ಸನ್ಮಾನಿಸಿದರು. 

ಬಿ.ಎಸ್.ಶರೀಫ್ ಕಾರ್ಯಕ್ರಮ ನಿರೂಪಿಸಿದರು.

Share: