ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ - ಶ್ರೀರಾಮಸೇನೆ ಖಂಡನೆ

ಭಟ್ಕಳ: ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ - ಶ್ರೀರಾಮಸೇನೆ ಖಂಡನೆ

Sat, 13 Feb 2010 18:51:00  Office Staff   S.O. News Service

ಭಟ್ಕಳ, ಫೆಬ್ರವರಿ೧೩ ಸುದ್ದಿವಾಹಿನಿಯ ಸಂವಾದ ಕಾಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕರ ಮುಖಕ್ಕೆ ಮಸಿ ಬಳಿದಿರುವ ಕ್ರಮವನ್ನು ಇಲ್ಲಿನ ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸಿದ್ದು ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ವನ್ನು ಜರುಗಿಸಬೇಕೆಂದು ಆಗ್ರಹಿಸಿದೆ.ಈ ಕುರಿತು ಇಂದು ಇಲ್ಲಿನ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳೆ ಮನವಿಯನ್ನು ಸಲ್ಲಿಸಲಾಗಿದೆ.

 

ಭಟ್ಕಳ ಶ್ರೀರಾಮ ಸೇನೆಯ ಮುಖಂಡ ಗಿರೀಶ ಶೆಟ್ಟಿಯವರ ನೇತೃತ್ವದಲ್ಲಿ ಉಪವಿಭಗಾಧಿಕಾರಿ ಕಛೇರಿ ಎದುರು ಸೇರಿದ್ದ ಸಂಘಟನೆಯ ಕಾರ್ಯಕರ್ತರು ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಮುತಾಲಿಕಜಿಯವರ ವಿರುದ್ದ ದುಷ್ಟ ಶಕ್ತಿಗಳು ನಡೆಸಿದ ಸಂಚಾಗಿದೆ. ಅರವ ಮುಖಕ್ಕೆ ಮಸಿಬಳಿಯುದರ ಮೂಲಕ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ ಸಂಘಟನೆ ಹಿಂದು ಪರ ಹೋರಾಟ ಮಾಡುತ್ತಿರುವ ಮುತಾಲಕರಿಗೆ ಸರಕಾರ ಸೂಕ್ತ ರಕ್ಷಣೆಯನ್ನು ನೀಡಬೆಕು ಎಂದು ಆಗ್ರಹಸಿತು. ಪಾಶ್ಚಾತ್ಯ ಸಂಸ್ಕೃತಿಯಾದ ಪ್ರೇಮಿಗಳ ದಿನಾಚರಣೆಗೆ ನಮ್ಮ ತೀವ್ರ ವಿರೊಧವಿದ್ದು, ಇದನ್ನು ಯಾರೂ ಆಚರಿಸಬಾರದು ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

 

ಸಹಾಯಕ ಕಮೀಷನರರ ಅನುಪಸ್ಥಿತಿಯಲ್ಲಿ ಮನವಿ ಸ್ವೀಕರಿಸಿದ ತಹಶೀಲ್ದಾರ ಎಸ್ ಎಂ ನಾಯ್ಕ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕುಮಾರ ನಾಯ್ಕ, ಜಯಂತ ನಾಯ್ಕ, ಎ.ಬಿ.ವಿ.ಪಿಯ ಮಂಜಪ್ಪ ನಾಯ್ಕ, ಸುರೇಶ ನಾಯ್ಕ, ಈಶ್ವರ ನಾಯ್ಕ, ಗಣಪತಿ ಮಹಾಲೆ, ಶ್ರೀಧರ ನಾಯ್ಕ, ಬಿ ಜೆ ಪಿ ಕೃಷ್ಣಾ ನಾಯ್ಕ, ಹಿಂದೂ ಜಾಗರಣಾ ವೇದಿಕೆಯ ಸಚಿನ ಮಹಾಲೆ ಮುಂತಾದವರು ಉಪಸ್ಥಿತರಿದ್ದರು.


Share: