ಭಟ್ಕಳ; ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ಹಾಗೂ ಬೆಲೆ ಏರಿಕೆ ನೀತಿ ವಿರುದ್ದ ಇಲ್ಲಿನ ಸಿ ಪಿ ಐ (ಎಂ) ಘಟಕದ ವತಿಯಿಂದ ಸಹಾಯಕ ಕಮೀಷನರರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಕೆ ನೀತಿಯನ್ನು ಹಿಂತೆಗೆಯಬೇಕು. ಕೇಂದ್ರ ಸರಕಾರವು ಬಜೆಟ್ನಲ್ಲಿ ಹೆಚ್ಚಿಸಿದ ಪೆಟ್ರೋಲ.ಡಿಸೇಲ್ ಮತ್ತು ಗೊಬ್ಬರ ದರಗಳನ್ನು ಹಿಂತೆಗದುಕೊಳ್ಳಬೇಕು. ರಾಜ್ಯ ಸರಕಾರವು ಇತ್ತೀಚೆಗೆ ಹೆಚ್ಚಿಸಿದ ವಿದ್ಯುತ್, ಹಾಲು, ಬಸ್ಸಿನ ದರವನ್ನು ಹಿಂತೆಗೆದುಕೊಳ್ಳಬೇಕು. ಹಾಲು ಪೂರೈಸುವ ರೈತರಿಗೆ ಸಬ್ಸಿಡಿ ನೀಡಬೇಕು. ನೀರಿನ ಕರ ಹೆಚ್ಚಿಸುವ ನಿರ್ಧಾರವನ್ನು ಕೈಬಿಡಬೇಕು. ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿ ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ಕೆ ಜಿಗೆ ೨ ರೂಪಾಯಿಯಂತೆ ಅಕ್ಕಿಯನ್ನು ಪಡಿತರ ಮೂಲಕ ವಿತರಿಸಬೇಕು. ೫೦ ಸಾವಿರ ವಾರ್ಷಿಕ ಆದಾಯವಿರುವ ಪ್ರತಿಯೊಬ್ಬರಿಗೂ ಬಿಪಿಎಲ್ ಪಡಿತರ ಚೀಟಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಸಿಪಿಐ ಎಂ ಮುಖಂಡ ಸುಭಾಸ ಕೊಪ್ಪಿಕರ, ಸಿ ಐ ಟಿಯುನ ಪ್ರಮುಖರು ಉಪಸ್ಥಿತರಿದ್ದರು.