ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಉಚಿತ ವೈದ್ಯಕೀಯ ಸೇವಾ ಕೇಂದ್ರ ‘ಅಲ್ ಫಲಾಹ್’ ಕ್ಲಿನಿಕ್ ಉದ್ಘಾಟನೆ

ಉಡುಪಿ: ಉಚಿತ ವೈದ್ಯಕೀಯ ಸೇವಾ ಕೇಂದ್ರ ‘ಅಲ್ ಫಲಾಹ್’ ಕ್ಲಿನಿಕ್ ಉದ್ಘಾಟನೆ

Tue, 15 Dec 2009 03:06:00  Office Staff   S.O. News Service
ಉಡುಪಿ, ಡಿ.14: ಜಮೀಯ್ಯತ್ತುಲ್ ಫಲಾಹ್ ಉಡುಪಿ ತಾಲೂಕು ಘಟಕದ ವತಿಯಿಂದ ಪಕೀರ್ಣಕಟ್ಟೆ ಮಸೀದಿ ಬಳಿ ನೂತನವಾಗಿ ತೆರೆಯಲಾಗಿರುವ ಉಚಿತ ವೈದ್ಯಕೀಯ ಸೇವಾ ಕೇಂದ್ರ ‘ಅಲ್ ಫಲಾಹ್’ ಕ್ಲಿನಿಕ್‌ನ ದ್ವಿತೀಯ ಶಾಖೆಯು ಶನಿವಾರ ಉದ್ಘಾಟನೆಗೊಂಡಿತು.

ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ ಜಲೀಲ್ ಸಾಹೇಬ್ ಕ್ಲಿನಿಕನ್ನು ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಖಲೀಲ್ ಅಹಮದ್ ಮಾತನಾಡಿ, ಬೆಳಪು ಗ್ರಾಮದ ವಿನಯನಗರದಲ್ಲಿರುವ ಜಮಾತ್‌ನ ೬೦ಕುಟುಂಬಗಳನ್ನು ದತ್ತು ಸ್ವೀಕರಿಸಿ, ಅವರಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿ ಕೊಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಮುಹಮ್ಮದ್ ಅಸ್ಲಂ ಖಾಜ್ಹಿ, ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ತಾಲೂಕು ಪಂಚಾಯತ್ ಸದಸ್ಯ ಅರುಣ್ ಶೆಟ್ಟಿ ಪಾದೂರು, ಅಬ್ದುಲ್ ಘನಿ ಖಾಜಿ, ಜಮೀಯ್ಯತ್ತುಲ್ ಫಲಾಹ್‌ನ ಜೆದ್ದಾ ಘಟಕದ ಮಾಜಿ ಅಧ್ಯಕ್ಷ ಶಭೀ ಅಹ್ಮದ್ ಖಾಜಿ, ದುಬೈ ಅನಿವಾಸಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಾಫರ್ ಸಾದಿಕ್, ಖತೀಬರಾದ ಮೌಲಾನ ಮುಹಮ್ಮದ್ ಆಲಂ ಸಾಬಿ ಭಾಗವಹಿಸಿದ್ದರು.

ಖಲೀಮುಲ್ಲಾ ತೋನ್ಸೆ ಸ್ವಾಗತಿಸಿದರು. ಇಬ್ರಾಹಿಂ ಸಾಹೇಬ್ ಕೋಟ ವಂದಿಸಿದರು. ಎಸ್.ಪಿ.ಉಮ್ಮರ್ ಫಾರೂಕ್ ಕಾರ್ಯಕ್ರಮ ನಿರೂಪಿಸಿದರು

Share: