ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ‘ನೂರ್ -ಎ -ಹಿದಾಯತ್’ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ: ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಲಿ: ಅಸ್ಗರ್ ಅಲಿ ಇಮಾಮ್

ಉಡುಪಿ: ‘ನೂರ್ -ಎ -ಹಿದಾಯತ್’ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ: ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಲಿ: ಅಸ್ಗರ್ ಅಲಿ ಇಮಾಮ್

Mon, 26 Apr 2010 02:36:00  Office Staff   S.O. News Service
ಉಡುಪಿ, ಎ.೨೫: ಪ್ರತಿನಿತ್ಯ ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕಾದರೆ ನಾವು ಸಂಘಟಿತ ಹೋರಾಟ ನಡೆಸಬೇಕು ಎಂದು ಮರ್ಕಝ್ ಎ-ಜಮೀಯತ್- ಎ-ಅಹ್ಲೆ ಹದೀಸ್ ಹಿಂದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹದಿ ಮದನಿ ಕರೆ ನೀಡಿದ್ದಾರೆ.

ಉಡುಪಿ ಇಸ್ಲಾಮಿಕ್ ದಾವಾ ಸೆಂಟರ್ ಹಾಗೂ ಜಮೀಯತ್- ಎ-ಅಹ್ಲೆ ಹದೀಸ್ ಕರ್ನಾಟಕ- ಗೋವಾ ವತಿಯಿಂದ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ‘ನೂರ್ -ಎ -ಹಿದಾಯತ್’ ರಾಜ್ಯ ಮಟ್ಟದ ಸಮ್ಮೇ ಳನದ ರವಿವಾರ ನಡೆದ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು.

ಶಂಕೆಯ ಮೇಲೆ ಪ್ರತಿನಿತ್ಯ ಮುಸಲ್ಮಾನರನ್ನು ಒಂದಲ್ಲ ಒಂದು ಘಟನೆಗೆ ಸಂಬಂಧಿಸಿ ಬಂಧಿಸಿ ಹಿಂಸಿಸಲಾಗುತ್ತಿದೆ. ಇದು ನಿಲ್ಲಬೇಕು ಎಂದ ಅಸ್ಗರ್ ಅಲಿ, ಯಾರಿಗೂ ಅನ್ಯಾಯವಾದರೂ ನಾವು ಅವರ ಪರವಾಗಿ ಧ್ವನಿಗೂಡಿಸಬೇಕು. ಅನ್ಯಾಯಯದ ವಿರುದ್ಧ ನಮ್ಮ ಧ್ವನಿ ಎಂದಿಗೂ ಕುಗ್ಗ ಬಾರದು ಎಂದರು.

ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪ್ರವಾದಿ ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕು ಎಂದವರು ಹೇಳಿದರು.

ಕರ್ನಾಟಕ-ಗೋವಾ ಜಮೀಯತ್ -ಎ-ಅಹ್ಲೆ ಹದೀಸ್ ಅಧ್ಯಕ್ಷ ಶೇಖ್ ಮುಹಮ್ಮದ್ ಝುಬೈರ್ ಉಮ್ರಿ ಮದನಿ, ವಿದ್ವಾಂಸರಾದ ಶೇಖ್ ಝಫರುಲ್ ಹಸನ್ ಮದನಿ, ಶೇಖ್ ಫೈಝಲ್ ಹಸನ್ ಉಮ್ರಿ ಮದನಿ, ಶೇಖ್ ಹಬೀಬುರ್ರಹ್ಮಾನ್ ಸಲಫಿ, ಶೇಖ್ ಅಬ್ದುಲ್ ವಕೀಲ್ ಮದನಿ,  ಶೇಖ್ ಅಶ್ಫಕ್ ಸಲಫಿ ಮದನಿ, ಶೇಖ್ ಸಲಾವುದ್ದೀನ್, ಅಬ್ದುಲ್ ವಾರಿಫ್ ಮದನಿ, ಕರ್ನಾಟಕ-ಗೋವಾ ಜಮೀಯತ್-ಎ-ಅಹ್ಲೆ ಹದೀಸ್‌ನ ಪ್ರಧಾನ ಕಾರ್ಯದರ್ಶಿ ಅಸ್ಲಂ ಖಾನ್, ಜೊತೆ ಕಾರ್ಯದರ್ಶಿ ಬಿ.ಮುನಾವರ್ ಅಲಿ ಮತ್ತಿತರರು ಹಾಜರಿದ್ದರು.

Share: