ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಳ್ಳಾರಿ: ಚುನಾವಣಾ ವೀಕ್ಷಕರ ನೇಮಕ

ಬಳ್ಳಾರಿ: ಚುನಾವಣಾ ವೀಕ್ಷಕರ ನೇಮಕ

Tue, 20 Apr 2010 03:23:00  Office Staff   S.O. News Service

ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ):: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅನುಕೂಲವಾಗುವಂತೆ

 ಪ್ರತಿಯೊಂದು ತಾಲ್ಲೂಕಿಗೂ ಒಬ್ಬ ಚುನಾವಣಾ ವೀಕ್ಷಕರನ್ನಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ತಿಳಿಸಿದರು.

 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ತಾಲ್ಲೂಕಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರೀ ಎಂ. ಪುಷ್ಪರಾಜ್ ಮೊಬೈಲ್ ಸಂಖೈ ೯೪೪೮೦ ೨೫೧೩೪, ಶಿರಗುಪ್ಪ ತಾಲ್ಲೂಕಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀ ಬಿ.ಟಿ. ಮಂಜುನಾಥ ಮೊ. ಸಂಖ್ಯೆ ೯೪೪೮೦ ೬೭೬೮೧, ಸಂಡೂರು ತಾಲ್ಲೂಕಿಗೆ ಜಿ.ಪಂ. ಉಪಕಾರ್‍ಯದರ್ಶಿ ಶ್ರೀ ಅನ್ನದಾನಯ್ಯ ಮೊ.ಸಂಖ್ಯೆ. ೯೪೪೮೦೮೫೫೦೭, ಹಗರಿಬೊಮ್ಮನಹಳ್ಳಿ ತಾಲ್ಲೂಕಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ಎಸ್. ಟಿ. ಪರಮೇಶ್ವರಪ್ಪ ಮೊ.ಸಂಖ್ಯೆ ೯೪೪೮೬೯೪೯೦೨, ಹೊಸಪೇಟೆ ತಾಲ್ಲೂಕಿಗೆ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀ ಎಸ್. ಇ. ದೇವಯ್ಯ ಮೊ. ಸಂಖ್ಯೆ ೯೯೦೧೧೧೭೨೭೭, ಕೂಡ್ಲಿಗಿ ತಾಲ್ಲೂಕಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀ ವಿ.ಎನ್. ಮೇಟಿ ಮೊ.ಸಂಖ್ಯೆ ೯೪೪೮೧೩೩೧೨೧ ಹಾಗೂ ಹಡಗಲಿ ತಾಲ್ಲೂಕಿಗೆ ಸಹಕಾರ ಸಂಘಗಳ ಉಪ ನಿಬಂಧಕ ಶ್ರೀ ಅಶೋಕ ವಿ. ಮೊರಬ ಮೊ. ಸಂಖ್ಯೆ ೯೪೪೮೮೮೭೦೯೭ ಅವರನ್ನು ನೇಮಿಸಲಾಗಿದೆ. ಈ ಚುನಾವಣಾ ವೀಕ್ಷಕರು ತಾಲ್ಲೂಕುಗಳಲ್ಲಿಯೇ ವಾಸ್ತವ್ಯ ಹೂಡಿ ಚುನಾವಣಾ ಕೆಲಸ ಮತ್ತು ಸದಾಚಾರ ಸಂಹಿತೆ ಜಾರಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

 

 

ಪ್ರಗತಿ ಪರಿಶೀಲನಾ ಸಭೆ ಮುಂದೂಡಿಕೆ

ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ಜಿಲ್ಲಾ ಉಸ್ತುವಾರಿ ಕಾರ್‍ಯದರ್ಶಿಗಳ ಅಧ್ಯಕ್ಷತೆಯಲ್ಲಿ ಏಪ್ರಿಲ್ ೨೦ ರಂದು ಏರ್ಪಡಿಸಿದ್ದ ಜಿಲ್ಲೆಯ ಅಭಿವೃದ್ಧಿ ಕಾರ್‍ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಏಪ್ರಿಲ್ ೨೪ ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ತಿಳಿಸಿದ್ದಾರೆ.

ಸಭೆಯು ಅಂದು ಬೆಳಿಗ್ಗೆ ೧೦.೩೦ ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು ಸ್ವತ: ಅಗತ್ಯ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಅವರು ಸೂಚಿಸಿದ್ದಾರೆ.

 

 

ವಿಮ್ಸ್ ಆಸ್ಪತ್ರೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಬಳ್ಳಾರಿ. ಏ.೧೯ (ಕರ್ನಾಟಕ ವಾರ್ತೆ): ವಿಮ್ಸ್ ಆಸ್ಪತ್ರೆಯ ಆವರಣದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು. ವಿಮ್ಸ್ ಆಸ್ಪತ್ರೆ ಹಾಗೂ ಆವರಣದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ನಿರ್ಮಿತ ಕವರ್, ಕಪ್, ಮತ್ತಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶ್ರೀ ಬಿ. ಶಿವಪ್ಪ ಅವರು ಆದೇಶ ಹೊರಡಿಸಿದ್ದಾರೆ.


Share: