ಸಕಲೇಶಪುರ, ನವೆಂಬರ್ 27:-ಇನ್ನೂ 10 ದಿನಗಳ ಒಳಗೆ ಪುರಭವನದಲ್ಲಿ ಸಂಘ ಸಂಸ್ಥೆಗಳ ಸಾಂಸ್ಕ್ರತಿಕ ಚಟುವಟಿಕೆ ನೆಡಸಲು ಅವಕಾಶ ನೀಡದಿದ್ದರೆ ಸಕಲೇಶಪುರ ಬಂದ್ ಮಾಡವ ಮೂಲಕ ಉಗ್ರವಾಗಿ ಪ್ರತಿಭಟಿಸಲು ವಿವಿದ ಸಂಘ ಸಂಸ್ಥೆಗಳ ಮುಖಂಡರು ತಿರ್ಮಾನಿಸಿದ್ದಾರೆ.ಪುರಭವನದಲ್ಲಿ ಜಯ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಾಗು ಕನ್ನಡ ಸಾಹಿತ್ಯ ಪರೀಷತ್‌ನ ಕಾರ್ಯಕ್ರಮ ನೆಡಸಲು ಅವಕಾಶ ನಿರಕರೀಸಿರುವುದನ್ನು ಖಂಡಿಸಿ ತಾ ಕಚೇರಿ ಎದುರು ಶುಕ್ರವಾರ ಹಮ್ಮಿಕೂಂಡಿದ್ದ ಪ್ರತಿಭಟನೆಯಲಿ ವಿವಿದ ಸಂಘ ಸಂಸ್ಥೆಗಳ ಮುಖಂಡರು ಮಾತನಾಡಿ ಪಟ್ಟಣದಲ್ಲಿ ಹಿರಿಯರು ಜನರ ಉಪಯೋಗಕ್ಕಾಗಿ ಪುರಭವನ ನಿರ್ಮಿಸಲು ಸ್ಥಳವಕಾಶ ನೀಡಿದ್ದಾರೆ, ಆದರೆ ಬ್ರೀಟಿಷ ಮನಸ್ಥಿತಿಯ ಅದಿಕಾರಿಗಳು ಈ ಸಂಭಾಗಣದಲ್ಲಿ ಯಾವುದೆ ಸಾಂಸ್ಕ್ರತಿಕ ಕಾರ್ಯಕ್ರಮ ನೆಡಸಲು ಅವಕಾಶ ನಿರಕಾರಿಸುವ ಮೂಲಕ ಹಿರಿಯರ ಅಬಿಲಾಷೆಗೆ ತಣ್ಣಿರು ಎರಚ್ಚಿದ್ದಾರೆ.
ಪಟ್ಟಣದ ಮದ್ಯ ಬಾಗದಲ್ಲಿರುವ ಪುರಭವನವನ್ನು ಹೋರತು ಪಡಿಸಿ ಪಟ್ಟಣದಲ್ಲಿ ಕಾರ್ಯಕ್ರಮ ನೆಡಸಲು ಸ್ಥಳವೆ ಇಲ್ಲ. ಇರುವದೊಂದು ಸ್ಥಳದಲ್ಲೂ ಅವಕಾಶ ನಿರಾಕರಿಸದರೆ ಸಂಸ್ಕ್ರತಿಕ ಕಾರ್ಯಕ್ರಮ ನೆಡಸುವದೆ ಬೇಡವ ಎಂದು ಪ್ರಶ್ನೀಸಿದರು. ಪ್ರತಿಭಟನೆಯ ನೇತ್ರತ್ವವವನ್ನು ಜಯ ಕರ್ನಾಟಕ ಸಂಘದ ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಸಮಾಜಿಕ ನ್ಯಾಯ ಹಾಗು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷೆ ಶಾರದಗುರುಮೂರ್ತಿ, ಮಹಿಳಾ ಮಾರ್ಗದರ್ಶಿ ಅಶೋಷಿಯಟ್ಸ್ ಅಧ್ಯಕ್ಷೆ ಕಲ್ಪಾನ ಕೀರ್ತಿ,ವೀರಶೈವ ಯುವ ಜಾಗೃತಿ ಅದ್ಯಕ್ಷ ಸಾ.ಸು ವಿಶ್ವನಾಥ,ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೆಹಭೂಬ್, ನಾಗರೀಕ ಸಂರಕ್ಷಣ ಸಮಿತಿಯ ಅದ್ಯಕ್ಷ ರವಿಕುಮಾರ್,ರೈತ ಸಂಘದ ಮುಖಂಡರಾದ ಕ್ಯಾನಹಳ್ಳಿ ರವಿ, ಹೆನ್ನಲಿ ಪಾಪಣ್ಣ, ಕರವೇ ಅಧ್ಯಕ್ಷ ಮಾಗೇರಿ ಸುರೇಶ್‌ಗೌಡ, ವಹಿಸಿದ್ದರು.