ಗದಗ: ಎಪ್ರಿಲ್ ೨೦: ಗದಗ ಜಿಲ್ಲಾ ಮತು ಸತ್ರ ನ್ಯಾಯಾಲಯ ಕಚೇರಿಯಲ್ಲಿ ಶೀಘ್ರಲಿಪಿಗಾರರು-೪, ಬೆರಳಚ್ಚುಗಾರರು-೫, ಬೆರಳಚ್ಚು ನಕಲುಗಾರರು-೫, ಆದೇಶಿಕ ಜಾರಿಕಾರ-೭ ಮತ್ತು ಜವಾನರ -೧೭ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಪಡೆದು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸದರಿ ಕಚೇರಿಯಲ್ಲಿ ದಿನಾಂಕ ೨೨-೫-೨೦೧೦ ರ ಸಂಜೆ ೫-೦೦ ಒಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ , ಶೈಕ್ಷಣಿಕ ಅರ್ಹತೆ , ಹುದ್ದೆಗಳ ವರ್ಗೀಕರಣ, ಆಯ್ಕೆ ವಿಧಾನ ಕುರಿತಂತೆ ಮಾಹಿತಿಯನ್ನು ಮುಖ್ಯ ಆಡಳಿತಾಧಿಕಾರಿಗಳು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ,ಗದಗ ಇವರನ್ನು ಸಂಪರ್ಕಿಸಬಹುದು.