ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಣಿಪಾಲ: ವಿಶ್ವಸಂಸ್ಥೆ ಇಂದು ಅಪ್ರಸ್ತುತ - ನಿರ್ಲಕ್ಷ್ಯ ಮೇಲು - ಎಂ.ವಿ.ಕಾಮತ್

ಮಣಿಪಾಲ: ವಿಶ್ವಸಂಸ್ಥೆ ಇಂದು ಅಪ್ರಸ್ತುತ - ನಿರ್ಲಕ್ಷ್ಯ ಮೇಲು - ಎಂ.ವಿ.ಕಾಮತ್

Sat, 03 Oct 2009 02:11:00  Office Staff   S.O. News Service
ಮಣಿಪಾಲ, ಅ 2: ಇಂದಿನ ಜಾಗತಿಕ ಪರಿಸ್ಥಿತಿಗೆ ಪ್ರಸ್ತುತವಲ್ಲದ ವಿಶ್ವಸಂಸ್ಥೆ ಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ  ಎಂದು ಹಿರಿಯ ಪತ್ರಕರ್ತ ಹಾಗೂ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಗೌರವ ನಿರ್ದೇಶಕ ಎಂ.ವಿ.ಕಾಮತ್ ಕರೆ ನೀಡಿದ್ದಾರೆ.

ಮಣಿಪಾಲದ ಮಣಿಪಾಲ ಇನ್‌ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ಆಶ್ರಯದಲ್ಲಿ ಸತತ ಮೂರನೆ ವರ್ಷದಲ್ಲಿ ಆಯೋಜಿಸಲಾಗಿರುವ ‘ಮಾದರಿ ವಿಶ್ವಸಂಸ್ಥೆ ಅಧಿವೇಶನ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. 

ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌ನಲ್ಲಿ ಒಂದು ಸ್ಥಾನಕ್ಕಾಗಿ ಭಾರತ ಉಳಿದ ರಾಷ್ಟ್ರಗಳನ್ನು ಬೇಡುತ್ತಿರುವುದರ ಔಚಿತ್ಯ ವನ್ನು ಪ್ರಶ್ನಿಸಿದ ಕಾಮತ್, ಇದು ನಾಚಿ ಕೆಗೇಡಿನ ಸಂಗತಿಯಾಗಿದ್ದು,  ವಿಶ್ವ ಸಂಸ್ಥೆಗೆ ಎಷ್ಟು ಬೇಕೊ ಅಷ್ಟು ಮಾತ್ರ ಪ್ರಾಮುಖ್ಯತೆಯನ್ನು ನೀಡಬೇಕು. ಕಳೆದ ಐದು ದಶಕಗಳಿಂದ ವಿಶ್ವ ಸಂಸ್ಥೆ ಅವನತಿಯ ಹಾದಿ ಹಿಡಿದಿದೆ ಎಂದು ಅವರು ತಿಳಿಸಿದರು.

ಅಮೆರಿಕವನ್ನು ಹೊರಗಿಟ್ಟು ಏಷ್ಯನ್ ರಾಷ್ಟ್ರಗಳೆಲ್ಲಾ ಸೇರಿ ವಿಶ್ವಸಂಸ್ಥೆಯ ಬದಲು ಏಶಿಯಾನ್ ರಾಷ್ಟ್ರಗಳ ಒಕ್ಕೂ ಟವನ್ನು ಸ್ಥಾಪಿಸಬೇಕಾಗಿದೆ. ಇದರ ಮುಖ್ಯ ಕಚೇರಿ ವಿಯೆಟ್ನಾಂ ಅಥವಾ ಕಾಂಬೋಡಿಯದಲ್ಲಿರಬೇಕು. ಇದೇ ರೀತಿ ಬೇರೆ ಬೇರೆ ಖಂಡಗಳಿಗೂ ಪ್ರತ್ಯೇಕವಾದ ಆಫ್ರಿಕನ್ ಒಕ್ಕೂಟ, ಲ್ಯಾಟಿನ್ ಅಮೆರಿಕನ್ ಒಕ್ಕೂಟ ಸ್ಥಾಪ ನೆಗೊಳ್ಳಬೇಕು ಎಂದು ವಿಶ್ವಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪತ್ರಕರ್ತ ರಾಗಿ ಕಾರ್ಯನಿರ್ವಹಿಸಿರುವ ಎಂ.ವಿ. ಕಾಮತ್ ನುಡಿದರು.

ಭದ್ರತಾ ಕೌನ್ಸಿಲ್‌ನ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತವಾಗಿದೆ. ಭಾರತ ವಿಶ್ವಾಸಾರ್ಹ ರಾಷ್ಟ್ರವಾಗಿದ್ದು, ಜಗತ್ತಿನ ಯಾವುದೇ ಮೂಲೆಯಲ್ಲಿ ತೊಂದರೆ, ಸಮಸ್ಯೆಗಳು ಕಾಣಿಸಿ ಕೊಂಡಾಗ ಭಾರತ ತನ್ನ ಪಡೆಯನ್ನು ಅಲ್ಲಿಗೆ ಕಳುಹಿಸಿದೆ ಎಂದು ಕಾಮತ್ ತಿಳಿಸಿದರು.

ಕಳೆದೊಂದು ದಶಕದಲ್ಲಿ ಭಾರತ ಯಾವುದೇ ದೇಶದ ಮೇಲೆ ಅತಿಕ್ರ ಮಣ ನಡೆಸಿದ, ಅಥವಾ ಇನ್ನೊಂದು ದೇಶದ ಮೇಲೆ ತನ್ನ ಕಾನೂನನ್ನು ಬಲವಂತವಾಗಿ ಹೇರಿದ ಉದಾಹರಣೆ ಇಲ್ಲ ಎಂದ ಕಾಮತ್, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳಿಗೆ ಭದ್ರತಾ ಕೌನ್ಸಿಲ್‌ನ ಸದಸ್ಯರಾಗುವ ಯಾವುದೇ ಅರ್ಹತೆ ಉಳಿದಿಲ್ಲ. ಅಮೆರಿಕಕ್ಕೆ ಎಲ್ಲಾ ಕಡೆಗ ಳಲ್ಲೂ ಯುದ್ಧವನ್ನು ಹರಡುವ ಆಸ ಕ್ತಿಯೇ ಹೊರತು ಶಾಂತಿಯ ಕುರಿತು ಅದು ತಲೆಕೆಡಿಸಿಕೊಂಡಿದ್ದೇ ಇಲ್ಲ ಎಂದರು.

ಭಾರತಕ್ಕೆ ಭದ್ರತಾ ಕೌನ್ಸಿಲ್‌ನಲ್ಲಿ ಶಾಶ್ವತ ಸದಸ್ಯತ್ವವನ್ನು ನೀಡಿದಾಗ ಅಂದಿನ ಪ್ರಧಾನಿ ಪಂಡಿತ್ ನೆಹರು ಅದನ್ನು ನಿರಾಕರಿಸಿ ಈ ಸ್ಥಾನಕ್ಕೆ ಚೀನದ ಅಭ್ಯರ್ಥಿಯನ್ನು ಬೆಂಬಲಿಸುವ ನಿರ್ಣಯ ಕೈಗೊಂಡರು. ಆದರೆ ಚೀನ ಭಾರತದ ಈ ಉದಾರತೆಗೆ ಯಾವತ್ತೂ ಕೃತಜ್ಞತೆಯನ್ನೇ ವ್ಯಕ್ತಪಡಿಸಲಿಲ್ಲ. ಈಗಂತೂ ಚೀನ ಭಾರತದ ಸದಸ್ಯ ತ್ವವನ್ನು ಬಲವಾಗಿ ವಿರೋಧಿಸುತ್ತಿದೆ ಎಂದು ಕಾಮತ್ ನುಡಿದರು.

ಅಂದು ನೆಹರೂ, ಈ ಪ್ರಸ್ತಾವವನ್ನು ಒಪ್ಪಿಕೊಂಡಿದ್ದರೆ, ಇಂದಿನ ಜಾಗತಿಕ ಸನ್ನಿವೇಶವೇ ಸಂಪೂರ್ಣವಾಗಿ ಬದಲಾ ಗಿರುತ್ತಿತ್ತು. ಅಲ್ಲದೇ ಕಾಶ್ಮೀರ ವಿಷಯ ವನ್ನು ಭದ್ರತಾ ಕೌನ್ಸಿಲ್‌ಗೆ ಕೊಂಡೊ ಯ್ದಿದ್ದು ನೆಹರು ಮಾಡಿದ ಅತ್ಯಂತ ದೊಡ್ಡ ತಪ್ಪು ಎಂದು ಕಾಮತ್ ಅಭಿಪ್ರಾಯಪಟ್ಟರು.

ಮಂಗಳೂರಿನ ಕಸ್ಟಮ್ ಸೆಂಟ್ರಲ್ ಎಕ್ಸೆಸ್ ಹಾಗೂ ಸರ್ವಿಸ್ ಟ್ಯಾಕ್ಸ್‌ನ ಕಮಿಷನರ್ ಅರವಿಂದ ಕುಮಾರ್ ಸಿಂಗ್ ಅಧಿವೇಶನವನ್ನು ಉದ್ಘಾಟಿಸಿ ದರು. ವೇದಿಕೆಯಲ್ಲಿ ಎಂಐಟಿಯ ನಿರ್ದೇಶಕ ಡಾ. ಸೋಮನಾಥ ಮಿಶ್ರ ಹಾಗೂ ಎಂಯು‌ಎನ್‌ನ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಕುಮಾರ್ ಉಪಸ್ಥಿತರಿದ್ದರು

Share: