ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗ್ರಾ.ಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 1035 ನಾಮಪತ್ರ ಸಲ್ಲಿಕೆ

ಗ್ರಾ.ಪಂ. ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 1035 ನಾಮಪತ್ರ ಸಲ್ಲಿಕೆ

Sat, 24 Apr 2010 13:31:00  Office Staff   S.O. News Service

ಉಡುಪಿ, ಎ.24: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಾಗಿ ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಶುಕ್ರವಾರ ಒಟ್ಟು 1035 ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 1770 ನಾಮಪತ್ರಗಳ ಸಲ್ಲಿಕೆಯಾದಂತಾಗಿದೆ.

ಇಂದು ಉಡುಪಿ ತಾಲೂಕಿನಲ್ಲಿ 603, ಕಾರ್ಕಳ ತಾಲೂಕಿನಲ್ಲಿ 319 ಹಾಗೂ ಕುಂದಾಪುರ ತಾಲೂಕಿನಲ್ಲಿ 113 ನಾಮ ಪತ್ರಗಳನ್ನು ಸಲ್ಲಿಸಲಾಗಿದೆ. ಇದರೊಂದಿಗೆ ಉಡುಪಿ ತಾಲೂಕಿನಲ್ಲಿ 1100, ಕಾರ್ಕಳ ತಾಲೂಕಿನಲ್ಲಿ 454 ಹಾಗೂ ಕುಂದಾಪುರ ತಾಲೂಕಿನಲ್ಲಿ 216 ನಾಮಪತ್ರಗಳು ಸಲ್ಲಿಸಿಕೆಯಾದಂತಾಗಿದೆ.ಉಡುಪಿ: ಉಡುಪಿ ತಾಲೂಕಿನ 61 ಗ್ರಾ.ಪಂ.ಗಳಿಗಾಗಿ ಇಂದು ಸಲ್ಲಿಕೆಯಾದ 603 ನಾಮಪತ್ರಗಳಲ್ಲಿ 401 ಪುರುಷರು ಹಾಗೂ 202 ಮಹಿಳಾ ಅಭ್ಯರ್ಥಿಗಳದ್ದಾಗಿದೆ.

ಇದುವರೆಗೆ 734 ಪುರುಷ ಹಾಗೂ 366 ಮಹಿಳಾ ಸ್ಪರ್ಧಾಕಾಂಕ್ಷಿಗಳು ಸೇರಿದಂತೆ ಒಟ್ಟು 1100 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಇಂದು ಪರಿಶಿಷ್ಟ ಜಾತಿಯ 31 (5 ಪುರುಷ + 26 ಮಹಿಳೆ), ಪರಿಶಿಷ್ಟ ಪಂಗಡದ 31(14+17), ಹಿಂದುಳಿದ ವರ್ಗ ಅ 158(108+50), ಹಿಂದುಳಿದ ವರ್ಗ ಬ 33(24+9), ಸಾಮಾನ್ಯ 350 (250+100) ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಕಾರ್ಕಳ

ಕಾರ್ಕಳ ತಾಲೂಕಿನ 29 ಗ್ರಾಪಂಗಳಿಗಾಗಿ ಇಂದು ಸಲ್ಲಿಕೆಯಾದ 319 ನಾಮಪತ್ರಗಳಲ್ಲಿ 198 ಪುರುಷರದ್ದು ಹಾಗೂ 121 ಮಹಿಳೆಯರದ್ದು. ಇವುಗಳಲ್ಲಿ ಪರಿಶಿಷ್ಟ ಜಾತಿ 34 (17+17), ಪರಿಶಿಷ್ಟ ಪಂಗಡ 25 (3+22), ಹಿಂದುಳಿದ ವರ್ಗ ಅ 105(63+42), ಹಿಂದುಳಿದ ವರ್ಗ ಬ 27(25+2), ಸಾಮಾನ್ಯ 262(193+69) ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಶಿವಪುರ ಪಂಚಾಯತ್ ನಲ್ಲಿ-5,ಕುಚ್ಚೂರು-1, ನಾಡ್ಪಾಲು-0, ಮರ್ಣೆ-19, ಹೆಬ್ರಿ-1, ಕುಕ್ಕುಂದೂರು-24, ಎರ್ಲಪಾಡಿ-19, ಬೈಲೂರು-4, ನೀರೆ-2, ನಿಟ್ಟೆ-15, ಬೋಳ-12, ಬೆಳ್ಮಣ್-15, ಮುಂಡ್ಕೂರು-21, ಶಿರ್ಲಾಲು-36, ಮಿಯಾರು-8, ಕಾಂತಾವರ-0, ಮುದ್ರಾಡಿ-14, ವರಂಗ-5, ಕಡ್ತಲ-8 ಮಾಳ-16, ದುರ್ಗಾ-16, ಮುಡಾರು-7, ಸಾಣೂರು-0, ನಲ್ಲೂರು-2,ಈದು-23, ರೆಂಜಾಳ-16, ಹಿರ್ಗಾನ-8, ಪಳ್ಳಿ-20, ಇನ್ನಾ-4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. 

ಕುಂದಾಪುರ

ಕುಂದಾಪುರ ತಾಲೂಕಿನ 53 ಗ್ರಾಪಂಗಳಿಗಾಗಿ ಇಂದು ಸಲ್ಲಿಕೆಯಾದ 113 ನಾಮಪತ್ರಗಳಲ್ಲಿ ಪುರುಷರದ್ದು 77 ಹಾಗೂ ಮಹಿಳೆಯರು 36. ಇವರಲ್ಲಿ ಪರಿಶಿಷ್ಟ ಜಾತಿಯ 7(2+5), ಪರಿಶಿಷ್ಟ ಪಂಗಡ 5(0+5), ಹಿಂದುಳಿದ ವರ್ಗ ಅ 16(10+6), ಹಿಂದುಳಿದ ವರ್ಗ ಬ 5(4+1), ಸಾಮಾನ್ಯ 80(61+19) ಮಂದಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಇಂದು ಶಿರೂರು-5,ಪಡುವರಿ-1, ಉಪ್ಪುಂದ-1, ಕೆರ್ಗಾಲು-2, ಕಾಲ್ತೋಡು -4, ಕಿರಿಮಂಜೇಶ್ವರ-4, ನಾವುಂದ-15, ನಾಡ-17, ಚಿತ್ತೂರು-2, ವಂಡ್ಸೆ-1, ಹಕ್ಲಾಡಿ-4, ಗುಜ್ಜಾಡಿ-4, ಹೆಮ್ಮಾಡಿ-1, ತಲ್ಲೂರು-6, ಕರ್ಕುಂಜೆ-5, ಸಿದ್ಧಾಪುರ-4, ಶಂಕರನಾರಾಯಣ-5, ಆನಗಳ್ಳಿ-5, ಕೋಣಿ-1, ಕೋಟೇಶ್ವರ-6, ಬೀಜಾಡಿ-3, ಕುಂಭಾಶಿ-6, ತೆಕ್ಕಟ್ಟೆ-3, ಕೆದೂರು-1, ಕಾಳಾವರ-2, ಹಾರ್ದಳ್ಳಿಮಂಡಳ್ಳಿ-1, ಹೆಂಗವಳ್ಳಿ-1, ಅಮಾಸೆಬೈಲ್-2, ನಾಮಪತ್ರ ಸಲ್ಲಿಕೆಯಾಗಿವೆ.


Share: