ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಅರುಣಾಚಲ ಪ್ರದೇಶ: ನನ್ನ ತವಾಂಗ್ ಭೇಟಿ ರಾಜಕೀಯ ರಹಿತ: ಅರುಣಾಚಲಕ್ಕೆ ಕಾಲಿಟ್ಟ ದಲಾಯಿ ಲಾಮ

ಅರುಣಾಚಲ ಪ್ರದೇಶ: ನನ್ನ ತವಾಂಗ್ ಭೇಟಿ ರಾಜಕೀಯ ರಹಿತ: ಅರುಣಾಚಲಕ್ಕೆ ಕಾಲಿಟ್ಟ ದಲಾಯಿ ಲಾಮ

Mon, 09 Nov 2009 02:35:00  Office Staff   S.O. News Service
ತವಾಂಗ್, ನ.೮: ಅರುಣಾಚಲ ಪ್ರದೇಶಕ್ಕೆ ತಾನು ಭೇಟಿ ನೀಡುವುದನ್ನು ವಿರೋಧಿಸಿದ್ದ ಚೀನದ ವಿರುದ್ಧ ಭಾವೋದ್ರೇಕದಿಂದ ಹರಿ ಹಾಯ್ದಿರುವ ಪರಮೋಚ್ಚ ಬೌದ್ಧಗುರು ದಲಾಯಿ ಲಾಮಾ, ತವಾಂಗ್ ತನ್ನದೆಂಬ ಚೀನದ ಪ್ರತಿಪಾದನೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ಅರುಣಾಚಲಕ್ಕೆ ಆಗಮಿಸಿದ ದಲಾಯಿ ಲಾಮಾ, ತಾನು ಎಲ್ಲಿಗೆ ಭೇಟಿ ನೀಡುವುದಕ್ಕೂ ವಿರೋಧಿಸುವುದು ಚೀನದ ಜಾಯಮಾನವಾಗಿದೆ. ತನ್ನ ತವಾಂಗ್ ಭೇಟಿ ರಾಜಕೀಯ ರಹಿತವಾದುದು ಎಂದರು.

೧೯೬೨ರ ಭಾರತ-ಚೀನ ಯುದ್ಧವನ್ನು ಜ್ಞಾಪಿಸಿದ ಅವರು, ಆ ಸಂದರ್ಭದಲ್ಲಿ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ ತವಾಂಗನ್ನು ಆಕ್ರಮಿಸಿ ಬೋಮ್ ದಿಲಾದ ಸಮೀಪದ ವರೆಗೆ ಬಂದಿತ್ತೆಂದು ಪತ್ರಕರ್ತರಿಗೆ ತಿಳಿಸಿದರು.

ಆದರೆ, ಆಗಿನ ಚೀನಿ ಸರಕಾರ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿತು. 

ಹಾಗೂ ಸೇನೆಯನ್ನು ಹಿಂದೆಗೆಯಿತು. ಈಗ ಚೀನೀಯರು ಬೇರೆಯೇ ಮಾತನಾಡುತ್ತಿದ್ದಾರೆ. ಇದು ತನಗೆ ಅರ್ಥವಾಗದ ವಿಚಾರವಾಗಿದೆ ಎಂದು ದಲಾಯಿ ಲಾಮಾ ಹೇಳಿದರು.

ತವಾಂಗ್ ತನ್ನದೆಂಬ ಚೀನದ ಪ್ರತಿಪಾದನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಇದರಿಂದ ತನಗೆ ಆಶ್ಚರ್ಯವಾಗಿದೆ ಎಂದರು.

ತನ್ನ ಭಾರತ ಭೇಟಿಗೆ ಚೀನದ ವಿರೋಧದ ಬಗ್ಗೆ ‘ಅದು ಸಾಮಾನ್ಯ ವಿಚಾರ’ ಎಂದು ಲಾಮಾ ಪ್ರತಿಕ್ರಿಯಿಸಿದರು.

Share: