ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಕಸ ಕೊಡದಿದ್ದರೆ ನೀರು ಬಿಡದ ನಗರಸಭೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಕಸ ಕೊಡದಿದ್ದರೆ ನೀರು ಬಿಡದ ನಗರಸಭೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Sat, 07 Nov 2009 03:21:00  Office Staff   S.O. News Service
ಉಡುಪಿ, ನ.೬: ಉಡುಪಿ ನಗರಸಭೆಯ ದುರಾಡಳಿತ ಹಾಗೂ ಸಿಬ್ಬಂದಿಗಳು ದಬ್ಬಾಳಿಕೆ ನqಸುತ್ತಿದ್ದಾರೆ ಎಂದು  ಆರೋಪಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಶುಕ್ರವಾರ ನಗರಸಭೆಯ  ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕಸ ನೀಡುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಳ್ಳಿನೀರಿನ ಸಂಪರ್ಕ ಕಡಿತಗೊಳಿಸುವ ಮೂಲಕ ನಗರಸಭೆ ಜನತೆಯ ಮೇಲೆ  ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಕಾರರು, ಈ ಕ್ರಮವನ್ನು ಕೂಡಲೇ ಕೈಬಿಡಬೇಕು ಹಾಗೂ ಈ ಬಗ್ಗೆ ನಗರಸಭಾ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಕಸ ಸಂಗ್ರಹಕ್ಕೆ ನಿಗದಿ ಪಡಿಸಿರುವ ಮಾಸಿಕ ಶುಲ್ಕ ಕಡು ಬಡವರಿಗೆ ಹೊರೆಯಾಗಿದ್ದು, ಇದನ್ನು ರದ್ದು ಪಡಿಸಬೇಕು. ನಗರದಲ್ಲಿ ಕಾನೂನು ಉಲ್ಲಂಘಿಸಿ ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಮಳೆಗಾಲದಲ್ಲಿ ದುರಸ್ತಿ ಕಾಣದೇ ಇದ್ದ ಹಲವು ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಬಳಿಕ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು.

ತುಘಲಕ್ ದರ್ಬಾರ್: ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎ.ಗಪೂರ್, ಪ್ರಜಾಪ್ರಭುತ್ವದಲ್ಲಿ ಜನತೆಗೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ಉಡುಪಿ ನಗರಸಭೆ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿರುವ ನಗರಸಭೆ, ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶೇಖರ್ ಮಡಿವಾಳ, ವರೋನಿಕ ಕರ್ನೆಲಿಯೊ, ದಿವಾಕರ್ ಕುಂದರ್, ನರಸಿಂಹಮೂರ್ತಿ, ಅಲೆವೂರು ನಾಗರಾಜ್, ಶಬ್ಬೀರ್ ಅಹ್ಮದ್, ಕುಶಲ್ ಶೆಟ್ಟಿ, ಇಸ್ಮಾಯೀಲ್ ಆತ್ರಾಡಿ, ಭಾಸ್ಕರ್ ರಾವ್ ಕಿದಿಯೂರು, ನಗರಸಭಾ ಸದಸ್ಯೆ ಆನಂದಿ, ಅಮೃತ್ ಶೆಣೈ, ಕೃಷ್ಣಮೂರ್ತಿ ಆಚಾರ್ಯ, ಹರೀಶ್ ಕಿಣಿ, ಹಬೀಬ್ ಅಲಿ, ಜನಾರ್ದನ ಭಂಡಾರ್ಕರ್, ಸುರೇಶ್ ಶೆಟ್ಟಿ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು.

Share: