ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಕುಂಜತ್ತೂರು: ಲಾರಿಗೆ ಬಸ್ಸು ಡಿಕ್ಕಿ: ವಿಧ್ಯಾರ್ಥಿಗಳು ಸಹಿತ ಪ್ರಯಾಣಿಕರು ಆಸ್ಪತ್ರೆಗೆ

ಕುಂಜತ್ತೂರು: ಲಾರಿಗೆ ಬಸ್ಸು ಡಿಕ್ಕಿ: ವಿಧ್ಯಾರ್ಥಿಗಳು ಸಹಿತ ಪ್ರಯಾಣಿಕರು ಆಸ್ಪತ್ರೆಗೆ

Fri, 06 Nov 2009 04:02:00  Office Staff   S.O. News Service
ಕುಂಜತ್ತೂರು, ನವೆಂಬರ್ ೫ :ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಖಾಸಗಿ ಬಸ್ಸೊಂದು ಹಿಂದಿನಿಂದ ಡಿಕ್ಕಿ ಹೊಡೆದು ವಿಧ್ಯಾರ್ಥಿಗಳು ಸಹಿತ ಸುಮಾರು ೧೫ ರಷ್ಟು ವಿಧ್ಯಾರ್ಥಿಗಳು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಉದ್ಯಾವರ ದಿಂದ ವರದಿಯಾಗಿದೆ.

ಇಂದು ಮಧ್ಯಾಹ್ನ ೧೨ ಘಂಟೆಯ ಹೊತ್ತಿಗೆ ತಲಪಾಡಿಯಿಂದ ವಿಧ್ಯಾರ್ಥಿಗಳನ್ನು ಹಾಗು ಪ್ರಯಾಣಿಕರನ್ನು ಹೇರಿ ಕೊಂಡು ಬರುತಿದ್ದ ರೋಯಲ್ ಟ್ರಾವೆಲ್ಸ್ ಹೆಸರಿನ ಬಸ್ಸೊಂದು ಉದ್ಯಾವರ ದಾಮೋದರ್ ಗ್ಯಾರೇಜಿನ ಎದುರುಬಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ವಿಧ್ಯಾರ್ಥಿಗಳು ಸಹಿತ ಸುಮಾರು ೧೫ ಪ್ರಯಾಣಿಕರು ಗಂಭೀರ ಗಾಯಗೊಂಡರು.ಕೂಡಲೇ ಸ್ಥಳೀಯರ ನೆರವಿನಿಂದ ಇವರನ್ನು ಮಂಗಳೂರು ಹಾಗು ಕಾಸರಗೋಡು ಆಸ್ಪತ್ರೆಗೆ ಸಾಗಿಸಲಾಯ್ತು.ಡಿಕ್ಕಿ ಹೊಡೆದ ಬಸ್ಸನ್ನು ಹಾಗು ರಸ್ತೆ ನಡುವಿನಲ್ಲಿ ನಿಲ್ಲಿಸಲಾಗಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ತಮ್ಮ ವಶಕ್ಕೆ ತೆಗೆದಿರುತ್ತಾರೆ.

ಉದ್ಯಾವರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾರೇಜ್ ನಲ್ಲಿ ಸ್ಥಳವಕಾಶ ಕಮ್ಮಿ ಇರುವುದರಿಂದ ಚಾಲಕರು ತಮ್ಮ ವಾಹನಗಳನ್ನು ರಸ್ತೆ ನಡುವಿನಲ್ಲೇ ನಿಲ್ಲಿಸಿ ಅಲ್ಲೇ ವಾಹನಗಳ ರಿಪೇರಿ ಕೆಲಸ ನಡೆಯುತ್ತಿರುತ್ತದೆ ಇದರಿಂದಾಗಿ ಈ ರಸ್ತೆಯಲ್ಲಿ ಹೆಚ್ಚಾಗಿ ಅಫಘಾತಕ್ಕೆ ಕಾರಣವಾಗುತ್ತಿದೆ ಎಂದು ನಾಗರೀಕರು ಆರೋಪಿಸುತ್ತಾರೆ.

ವರದಿ: ಅಬ್ದುಲ್ ರಹಮಾನ್ ಉದ್ಯಾವರ


Share: