ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಳ್ಳಾಲ: ಗ್ರಾಹಕರಿಗೆ ಕಿರುಕುಳ ನೀಡುವ ಅವಿನಾಶ್ ಗ್ಯಾಸ್ ಏಜೆನ್ಸಿ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

ಉಳ್ಳಾಲ: ಗ್ರಾಹಕರಿಗೆ ಕಿರುಕುಳ ನೀಡುವ ಅವಿನಾಶ್ ಗ್ಯಾಸ್ ಏಜೆನ್ಸಿ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Tue, 12 Jan 2010 03:07:00  Office Staff   S.O. News Service
ಉಳ್ಳಾಲ,ಜನವರಿ 11: ಅಡುಗೆ ಅನಿಲ ವಿಳಂಬ ಮತ್ತು ಗ್ರಾಹಕರಿಗೆ ಕಿರುಕುಳ ನೀಡುವ  ಉಳ್ಳಾಲ ಅವಿನಾಶ್ ಗ್ಯಾಸ್ ಏಜನ್ಸಿ ವಿರುದ್ಧ  ತುಳುನಾಡ ರಕ್ಷಣಾ ವೇದಿಕೆ  ಕೇಂದ್ರ ಘಟಕ ಮಂಗಳೂರು ಇದರ ವತಿಯಿಂದ ಶಾಂತಿಯುತ ಪ್ರತಿಭಟನೆ ಇಂದು ಉಳ್ಳಾಲ ಪುರಸಭೆ ಎದುರಿನಲ್ಲಿ ನಡೆಯಿತು.

ಉಳ್ಳಾಲ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಡುಗೆ ಅನಿಲ ವಿತರಕರಾದ ಅವಿನಾಶ್ ಗ್ಯಾಸ್ ಏಜೆನ್ಸಿಯು ಆಹಾರ  ಇಲಾಖೆಯ ಆದೇಶದಂತೆ ಇಪ್ಪತ್ತು ದಿನಕ್ಕೊಂದರಂತೆ ಅಡುಗೆ ಅನಿಲ ಪೂರೈಕ ಮಾಡಬೇಕಿದ್ದು, ಆದರೆ ಇದನ್ನು ವಿಳಂಬವಾಗಿ 40-45 ದಿವಸಕ್ಕೊಮ್ಮೆ ವಿತರಣೆ ಮಾಡುತ್ತಿದ್ದಾರೆ, ಗ್ರಾಹಕರ ಕರೆಗೆ ಸ್ಪಂಧಿಸದೆ ಇರುವುದರ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ   ಪಟ್ಟಣ ಪ್ರದೇಶಕ್ಕೆ 20, ದಿವಸಕ್ಕೊಂದು ಸಿಲಿಂಡರ್ ಮತ್ತು ಗ್ರಾಮಾಂತರಕ್ಕೆ 45 ದಿವಸಕ್ಕೊಂದು ಸಿಲಿಂಡರ್ ಎಂಬ ಮಲತಾಯಿ ಧೋರಣೆಯನ್ನು ನಿಲ್ಲಿಸಬೇಕು, ಖಾಸಗಿ ಅಂಗಡಿಗಳಲ್ಲಿ ಕಾಳಸಂತೆಯಾಗಿ ರೂ 650 ಕ್ಕೆ ಮಾರಾಟ ಮಾಡುವುದನ್ನು ನಿಲ್ಲಿಸಬೇಕು, ಹೊಟೇಲ್ ಮತ್ತು ವಾಹನಗಳಿಗೆ ಕಾಳಸಂತೆಯಲ್ಲಿ ಅಡುಗೆ ಅನಿಲ ಪೂರೈಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ ಅವರು ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯಲ್ಲಿ ಸಾರ್ವಜನಿಕರನ್ನು ಸಂಘಟಿಸಿ ಗ್ಯಾಸ್ ಪೂರೈಕೆದಾರರ ಅನ್ಯಾಯದ ವಿರುದ್ಧ  ಪ್ರತಿಭಟನೆ ನಡೆಸಲಿದ್ದೇವೆ ಎಂದರು.
 
ಉಳ್ಳಾಲದ ಸಮಸ್ಯೆ ಬಗೆ ಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಳ್ಳಾಲ ಮುಖ್ಯಪೇಟೆಯಲ್ಲಿ  ದಾರಿ ಮಧ್ಯೆ ಕಟ್ಟಿಗೆ ಒಲೆಯನ್ನು ಉಪಯೋಗಿಸಿ ಆಹಾರ ಬೇಯಿಸುವ ಮುಖಾಂತರ ಉಗ್ರವಾದ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹವನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ಪ್ರತಿಭಟನೆ ನೇತೃತ್ವವವನ್ನು ತುಳುನಾಡ ರಕ್ಷಣಾ ವೇದಿಕೆ  ಪ್ರ.ಕಾರ್‍ಯದರ್ಶಿ ಹಮೀದ್ ಹಸನ್ ಮಾಡೂರು, ಉಪಾಧ್ಯಕ್ಷ ಚಂದ್ರಹಾಸ ರಯ ಪಿಲಾರ್, ಕೋಶಾಧಿಕಾರಿ ಎಂ.ಜಿ.ರಹೀಂ, ಸಂಘಟನಾ ಕಾರ್‍ಯದರ್ಶಿಗಳಾದ ರವಿ ಶೆಟ್ಟಿ ಮಾಡೂರು, ಗಂಗಾಧರ ಶೆಟ್ಟಿ ಮಡ್ಯಾರ್, ಜೊತೆ ಕಾರ್‍ಯದರ್ಶಿ ಗಫೂರ್ ಉಳ್ಳಾಲ್, ಫಾರೂಕ್ ಕಿನ್ಯಾ, ಜ್ಯೋತಿಕಾ ಜೈನ್, ಮುನೀರ್ ಮುಕ್ಕಚ್ಚೇರಿ, ಮುಸ್ತಾಫ ಮುಕ್ಕಚ್ಚೇರಿ, ನಾಗೇಶ್, ಗಂಗಾಧರ್ ತಲಪಾಡಿ, ನಾಗೇಶ್ ಶೆಟ್ಟಿ ತೊಕ್ಕೊಟ್ಟು ಹಾಗೂ ತುಳುನಾಡ ರಕ್ಷಣಾ ವೇದಿಕೆ ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. 

Share: