ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಟ್ವಾಳ: ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಮಗಾರಿಗೆ ಸರ್ಕಾರದಿಂದ ಒಂದು ಕೋಟಿ ರೂ ಅನುದಾನ - ಗೃಹಸಚಿವ ವಿ.ಎಸ್.ಆಚಾರ್ಯ

ಬಂಟ್ವಾಳ: ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಮಗಾರಿಗೆ ಸರ್ಕಾರದಿಂದ ಒಂದು ಕೋಟಿ ರೂ ಅನುದಾನ - ಗೃಹಸಚಿವ ವಿ.ಎಸ್.ಆಚಾರ್ಯ

Wed, 14 Apr 2010 03:23:00  Office Staff   S.O. News Service

ಬಂಟ್ವಾಳ, ಏಪ್ರಿಲ್ ೧೫ ; ಪುನರ್ ನಿರ್ಮಾಣದ ಹತಂದಲ್ಲಿರುವ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಮಗಾರಿಗೆ ಸರ್ಕಾರದಿಂದ ಒಂದು ಕೋಟಿ ರೂ ಅನುದಾನ ನೀಡುವುದಾಗಿ ರಾಜ್ಯ ಗೃಹಸಚಿವ ವಿ.ಎಸ್.ಆಚಾರ್ಯ ಹೇಳಿದ್ದಾರೆ. ಬುಧವಾರ ದೇವಸ್ಥಾನದ ಆವರಣದಲ್ಲಿ ನಡೆದ ಒಂಭತ್ತನೇ ವರ್ಷದ ನಿಧಿ ಸಂಚಯನದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅವರಿ ಮಾತನಾಡಿದರು.

 

 

15-bnt2.jpg 

ದೇವಳದ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು, ಭಕ್ತರು ಈ ಸತ್ಕಾರ್ಯದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದರು. ಸರ್ಕಾರ ಮುಜರಾಯಿ ಇಲಾಖೆಯಿಂದ ಈ ಬಾರಿ ರಾಜ್ಯದ ಸುಮಾರು ೩೫೦ ದೇವಸ್ಥಾನಗಳಿಗೆ ವಿಶೇಷ ನಿಧಿಯಾಗಿ ೩೨ ಕೋಟಿ ರೂ ಮೀಸಲಿರಿಸಿದೆ ಎಂದು ಅವರು ಹೇಳಿದರು. ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಮೈಸೂರಿನ ನ್ಯಾಯವಾದಿ ಶ್ಯಾಂ ಭಟ್ ಮುಖ್ಯ ಅತಿಥಿಯಾಗಿದ್ದರು. ಜನಾರ್ಧನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು. ಜಿಪಂ ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಜನಾರ್ಧನ ಪೈ.ಸೀತಾರಾಂ ಶೆಟ್ಟಿ. ಯಶು ವಿಟ್ಲ ಉಪಸ್ಥಿತರಿದ್ದರು.


Share: