ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ಗೋಡಂಬಿ ಉದ್ದಿಮೆದಾರರ ಸಂವಾದ: ಪ್ರೋತ್ಸಾಹ ನೀಡಲು ಕಾರ್ಪೊರೇಶನ್ ಬ್ಯಾಂಕ್ ಬದ್ಧ -ಜೆ.ಎಂ. ಗಾರ್ಗ್‌

ಕಾರ್ಕಳ: ಗೋಡಂಬಿ ಉದ್ದಿಮೆದಾರರ ಸಂವಾದ: ಪ್ರೋತ್ಸಾಹ ನೀಡಲು ಕಾರ್ಪೊರೇಶನ್ ಬ್ಯಾಂಕ್ ಬದ್ಧ -ಜೆ.ಎಂ. ಗಾರ್ಗ್‌

Fri, 09 Oct 2009 04:57:00  Office Staff   S.O. News Service
ಕಾರ್ಕಳ, ಅ.೮: ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡು ತ್ತಿರುವ ಗೋಡಂಬಿ ಉದ್ದಿಮೆದಾರರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಕಾರ್ಪೊರೇಶನ್ ಬ್ಯಾಂಕ್ ಬದ್ಧ  ಎಂದು ಕಾರ್ಪೊರೇಶನ್ ಬ್ಯಾಂಕ್ ಅಧ್ಯಕ್ಷ ಜೆ.ಎಂ.ಗಾರ್ಗ್ ಹೇಳಿದ್ದಾರೆ.
 
ಕಾರ್ಕಳದ ಪ್ರಕಾಶ್ ಹೊಟೇಲ್‌ನ ಸಂಭ್ರಮ ಸಭಾಂಗಣದಲ್ಲಿ ಕಾರ್ಪ್ ಬ್ಯಾಂಕ್ ವತಿಯಿಂದ ಗುರುವಾರ ನಡೆದ ಗೋಡಂಬಿ ಉದ್ದಿಮೆದಾರರ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಜಿಲ್ಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ಬ್ಯಾಂಕ್ ಇಂದು ಭಾರತದ ಪ್ರಮುಖ ಬ್ಯಾಂಕ್ ಆಗಿ ಬೆಳೆದಿದ್ದು, ೧.೩೩ಲಕ್ಷ ಕೋ.ರೂ. ವ್ಯವಹಾರ ನಡೆಸಿದೆ. ವಾರ್ಷಿಕ ಶೇ.೩೧ ಅಭಿವೃದ್ಧಿ ತೋರಿದೆ. ಎಂದರು. 

ಬ್ಯಾಂಕಿನ ಮ್ಯಾನೇಜರ್ ಎಂ.ಆರ್. ನಾಯಕ್ ಮಾತನಾಡಿ, ಕಾರ್ಕಳದಲ್ಲಿ ವಿದೇಶಿ ವಿನಿಮಯ ವಿಭಾಗ ಆರಂಭಿಸುವುದಾಗಿ ತಿಳಿಸಿದರು.

ಗಾಯತ್ರಿ ಕ್ಯಾಶ್ಯೂ ಮಾಲಕ ಬೋಳ ಪ್ರಭಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. 

ಉದ್ಯಮಿಗಳಾದ ಗಣಪತಿ ಹೆಗ್ಡೆ, ಗೋಕುಲ್ ದಾಸ್, ವೇದವ್ಯಾಸ ಪ್ರಭು ಉಪಸ್ಥಿತರಿದ್ದರು. 

ಬ್ಯಾಂಕಿನ ವಲಯಾ ಧಿಕಾರಿ ಎಂ.ಗೋಪಾಲ ಕೃಷ್ಣ ಭಂಡಾರ್ಕರ್ ಬ್ಯಾಂಕಿನ ವಿವಿಧ ಯೋಜನೆಗಳ ಪರಿಚಯ ನೀಡಿದರು. 

ಶಾಖಾಧಿಕಾರಿ ಮೋಹನ್‌ದಾಸ್ ನಾಯಕ್ ವಂದಿಸಿದರು. ಹಿರಿಯ ಪ್ರಬಂಧಕ ವೇಣುಗೋಪಾಲ, ಶಂಕರ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Share: