ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂಜತ್ತೂರು: ತಂಡಗಳ ನಡುವಿನ ಘರ್ಷಣೆ :5 ಜನರಿಗೆ ಗಾಯ

ಕುಂಜತ್ತೂರು: ತಂಡಗಳ ನಡುವಿನ ಘರ್ಷಣೆ :5 ಜನರಿಗೆ ಗಾಯ

Fri, 06 Nov 2009 04:14:00  Office Staff   S.O. News Service
ಕುಂಜತ್ತೂರು, ನವೆಂಬರ್ 5 :ಎರಡು ತಂಡಗಳ ನಡುವೆ ನಡೆದ ಘರ್ಷಣೆಯಲ್ಲಿ 5 ಮಂದಿ ಗಾಯಗೊಂಡ ಬಗ್ಗೆ ಚೆರುಗೋಳಿಯಿಂದ ವರದಿಯಾಗಿದೆ.

ಘರ್ಷನೆಯಲ್ಲಿ ಗಾಯಗೊಂಡ ಚೆರುಗೋಳಿ ನಿವಾಸಿ ಗಳಾದ ಸಕರಿಯಾ(೧೬) ದಯಾನಂದ (೨೧) ಕೇಶವ (೫೨) ಇವರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಹಾಗು ಚೆರುಗೋಳಿ ನಿವಾಸಿಗಳಾದ ರಾಮ(೨೨) ನಂದ ಕುಮಾರ್(೨೮) ಇವರನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲೂ ದಾಖಲಿಸಲಾಗಿದೆ.
 
ಕಳೆದ ರಾತ್ರಿ ಚೆರುಗೋಳಿ ಅಂಗಡಿಯೊಂದರಲ್ಲಿ ಕುಳಿತಿರುವಾಗ ದಯಾನಂದ ನೇತೃತ್ವದ ತಂಡ ಅಕ್ರಮಿಸಿರುವುದಾಗಿ ಸಕರಿಯಾ ಆರೋಪಿಸಿದ್ದಾರೆ. ಅದೇರೀತಿ ಅಂಗಡಿಯಲ್ಲಿ ಕುಳಿತಿದ್ದ ತನ್ನನ್ನು ಸಕರಿಯಾ ತಂಡ ಅಕ್ರಮಿಸಿರುವುದಾಗಿ ದಯಾನಂದ ಆರೋಪಿಸಿದ್ದಾರೆ.ಇಬ್ಬರಿಗೂ ಗಾಯಗಲುಂಟಾಗಿವೆ.ಇತ್ತಂಡಗಳ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಯುತ್ತಿದೆ. 

ವರದಿ: ರಹಿಮಾನ್ ಉದ್ಯಾವರ

Share: