ಕಾಸರಗೋಡು, ಸೆ.29: ಕಳೆದ 4 ತಿಂಗಳಿಂದ ನಾಪತ್ತೆಯಾಗಿರುವ ರಿಯಾನಾ ಮಂಗಳೂರಿನಲ್ಲಿ ಗೃಹ ಬಂಧನದಲ್ಲಿರುವ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದಂಧೆ ಮತ್ತು ವೇಶ್ಯಾ ವಾಟಿಕೆ ಜಾಲ ಇದರ ಹಿಂದೆ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ರಿಯಾನಾಳಲ್ಲದೆ ಇತರ ಕೆಲವು ಬಾಲಕಿಯರು ಈ ಜಾಲದಲ್ಲಿ ಸಿಲುಕಿ ಕೊಂಡಿದ್ದು ಮಂಗಳೂರಿನ ವಸತಿ ಗೃಹವೊಂದರಲ್ಲಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವು ಮಂಗಳೂರನ್ನು ಕೇಂದ್ರೀಕರಿಸಿ ತನಿಖೆಯನ್ನು ಚುರುಕುಗೊಳಿಸಿದೆ.
ಕೆಲವು ಪೊಲೀಸ್ ಅಧಿಕಾರಿಗಳ ಹಾಗೂ ರಾಜಕೀಯ ನಾಯಕರ ಬೆಂಬಲದೊಂದಿಗೆ ಈ ಜಾಲವು ಹಂಪನಕಟ್ಟೆ ಮತ್ತು ಕೊಡಿಯಾಲ್ ಬೈಲ್‌ನಲ್ಲಿ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ.
ಪೊಲೀಸ್ ಕಾರ್ಯಾಚರಣೆಗೆ ಮೊದಲೇ ಈ ಜಾಲಕ್ಕೆ ಮಾಹಿತಿ ಲಭಿಸಿರುವುದರಿಂದ ಇದುವರೆಗೆ ರಿಯಾನಾಳ ಪತ್ತೆ ಕಾರ್ಯ ಸಾಧ್ಯವಾಗಿರಲಿಲ್ಲ.
ಮೇ ೧೮ರಿಂದ ರಿಯಾನಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈಕೆಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದಾಗ ನಾಲ್ಕು ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಬಾಲಕಿಯರನ್ನು ರಕ್ಷಿಸಲಾಗಿದೆ.
ರಿಯಾನಾಳ ಪತ್ತೆಗೆ ಒತ್ತಾಯಿಸಿ ತಾಯಿಯ ಉಪವಾಸ ಮುಷ್ಕರ ೬ನೆ ದಿನಕ್ಕೆ
ನಿಗೂಢವಾಗಿ ನಾಪತ್ತೆಯಾಗಿರುವ ರಿಯಾನಾಳನ್ನು ಶೀಘ್ರ ಪತ್ತೆ ಹಚ್ಚುವಂತೆ ಒತ್ತಾಯಿಸಿ ಆಕೆಯ ತಾಯಿ ಫೌಝಿಯಾ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರನೆ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾ ಜನಪರ ನ್ಯಾಯವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಮುಷ್ಕರಕ್ಕೆ ಮುಸ್ಲಿಂ ಲೀಗ್, ಸಿಪಿಎಂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಶಾಸಕ ಸಿ.ಟಿ.ಅಹ್ಮದಾಲಿ ಮಂಗಳವಾರ ಉಪವಾಸ ನಿರತ ಫೌಝಿಯಾರನ್ನು ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.